ಕವಿತೆ: ಗುರುವಿಗೊಂದು ನಮನ

– ವೆಂಕಟೇಶ ಚಾಗಿ.

ಗುರುವಿಲ್ಲದೆ ಬದುಕಿಲ್ಲ
ಗುರುವಿಲ್ಲದೆ ನಾವಿಲ್ಲ
ಗುರುವೇ ನೀನೇ ಶಕ್ತಿ
ಗುರುವೇ ನಮಗೆ ಮುಕ್ತಿ

ಓದು ಬರಹ ಕಲಿಸಿ
ಆಟ ಪಾಟದಿ ನಗಿಸಿ
ದಾರಿದೀಪವಾದೆ ಎಮಗೆ
ಎಂದೂ ತೋರಲಿಲ್ಲ ಹಗೆ

ತಂದೆ ತಾಯಿ ಜನ್ಮದಾತರು
ಬದುಕಿಗೆ ನೀನೇ ಕಲ್ಪತರು
ಹ್ರುದಯದಲ್ಲಿ ಪ್ರೀತಿ ಬಿತ್ತಿ
ಬೆಳೆದೆ ಒಳಗೆ ನೂರು ಶಕ್ತಿ

ನೂರು ಜನ್ಮದಲ್ಲಿ ನೀನೇ
ಕಾಣದೆಂದು ಮನದಿ ಬೇನೆ
ಬದುಕಿನಲ್ಲಿ ಪ್ರೀತಿ ಸೋನೆ
ಸದಾ ಇರಲಿ ನಿನ್ನ ಬೋದನೆ

ಗುರುವಿಗೊಂದು ನನ್ನ ನಮನ
ತೀರದೆಂದು ನಿನ್ನ ರುಣ
ಶಾಂತಿ ಸ್ನೇಹ ಪ್ರೀತಿ ಬಯಕೆ
ಗುರುವೇ ನೀನೆ ನಮ್ಮ ಹರಕೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: