ವಚನಗಳು

– .

ದೇವರು. ಪ್ರಾರ‍್ತನೆ, ಕೋರಿಕೆ, prayer, god

***ಬಾಳು***

ಅವನಿಯೊಳಗೆ ಬಿತ್ತಿದ
ಬೀಜ ಮೊಳಕೆಯೊಡೆದು,
ಮೊಳಕೆಯು ಚಿಗುರಾಗಿ,
ಚಿಗುರು ಎಲೆಯಾಗಿ,
ಎಲೆಯು ಹೂವಾಗಿ,
ಹೂವು ಕಾಯಿಯಾಗಿ,
ಕಾಯಿ ಪಲವಾಗಿ,
ಪಲವು ರುಚಿಸಲು;
ರುಚಿಸಿ ಹ್ರುನ್ಮನವನು,
ತಣಿಸಿ ಸಾರ‍್ತಕಗೊಳ್ಳಲು,
ಹಲವು ದಿನಗಳ ಬೇಕಾಗಿರಲು,
ಎಲೈ ಮಾನವನೇ ಆತುರವೇಕೆ
ಬೀಜ ಪಲವಾಗುವ ರೀತಿಯಲಿ
ತಾಳಿದವರು ಬಾಳಿಯಾರಲ್ಲವೇ ?
ತಿಳಿದು ಬಾಳಿದರೆ ಸಾರ‍್ತಕ ಬಾಳದು
ತಿಳಿಗೇಡಿಯಂತಾಡಿದರೆ ಗೋಳದು
ತಿಳಿದು ನಡೆಯಿರೆಂದರೆಮ್ಮ
ಶ್ರೀ ತರಳಬಾಳು ಸದ್ಗುರುವು.

***ಮರೆತರೆ***

ಕಾವಿಯ ತೊಟ್ಟರೇನಯ್ಯ
ಕಾಮದ ಮನವ ಬಿಡದಿರೆ
ಕಾದಿಯ ಉಟ್ಟರೇನಯ್ಯ
ಗಾದಿಯ ಆಸೆಯ ಬಿಡದಿರೆ
ಕಾಕಿಯ ದರಿಸಿದರೇನಯ್ಯ
ಶೋಕಿಯ ಲಂಚವ ಬಿಡದಿರೆ
ಬಕ್ತರಂತೆ ನಾಮವ ಹಾಕಿದರೇನಯ್ಯ
ಶಿವ ಶರಣರನು ಅರಿಯದಿರೆ
ಮಾನವರಾಗಿ ಹುಟ್ಟಿದರೇನಯ್ಯ
ಶ್ರೀತರಳಬಾಳು ಸದ್ಗುರುವ ಮರೆತರೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: