ಹನಿಗವನಗಳು

– ವೆಂಕಟೇಶ ಚಾಗಿ.

ಮುದ್ದುಮನಸೆ

ಹಗಲಿರುಳು ದುಡಿದುಡಿದು
ಹಗೆಯುಂಡು ನಗುಮರೆತು
ತನುಮನವ ಕಡೆಗಣಿಸೆ
ಸುಕವೆನಿತು ಮುದ್ದುಮನಸೆ

ಬರುವುದೆಲ್ಲವ ಉಂಡು

ಬಂದು ಹೋದುದು ಮತ್ತೆ ಬರದು
ಮುಂದೆ ಬರುವುದು ಬರದೇ ಇರದು
ಬರುವುದೆಲ್ಲವ ಉಂಡು ಜಗದಲಿ
ಮೊಂಡನಂತಿರು ಮುದ್ದು ಮನಸೆ

ಅನಂತನಾಗಿರು

ಕಳೆದುದು ಕತೆ ಬರುವುದು ಬವಿಶ್ಯ
ಕತೆಗೆ ಕೊರಗಿ ಬವಿಶ್ಯಕ್ಕೆದರಿದೊಡೆ
ಇರುವ ದಿನಗಳ ಎನಿತು ಸುಕಿಸುವೆ
ಅನಂತನಾಗಿರು ಮುದ್ದು ಮನಸೆ

ಹರುಶದೊನಲು

ನೊಗವೊಂದು ಹೆಗಲೆರಡು
ಹಗಲು ಇರುಳಿನ ಆಡಂಬರದಿ
ಬದುಕ ಹರಗಿದೊಡೆ ಹರುಶದೊನಲು
ಅರಿತುಕೋವೀಸತ್ಯ ಮುದ್ದು ಮನಸೆ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks