ಹನಿಗವನಗಳು

– ವೆಂಕಟೇಶ ಚಾಗಿ.

*** ಬಾಲ್ಯ ***

ಬಾಲ್ಯ ಬಯಸಿದೊಡೆ ಮತ್ತೆ ಮರಳೀತೇ
ಯೌವನದ ರಂಗೋಲಿ ಮತ್ತೆ ಮೂಡುವುದೇ
ಕಾಲಕಾಲದಿ ಕಾಲ ಕಲಿಸುವ ವಿವಿದ ಪಾಟ
ಕಲಿತು ಮರೆಯದಿರು ಮುದ್ದು ಮನಸೇ

*** ಅಳೆದುಬಿಡು ***

ಅಳೆದುಬಿಡು ನಿನ್ನಾತ್ಮವನು ತ್ರುಪ್ತಿಯಿಂದ
ಅಳೆದುಬಿಡು ನಿನ್ನವದಿಯನು ಕ್ರುತಿಯಿಂದ
ಅಳೆದುಬಿಡು ಬದುಕನ್ನು ಸಾದನೆಯಿಂದ
ನಿನ್ನ ನಿಜದಸ್ತದೊಳಗೆ ಮುದ್ದು ಮನಸೆ

*** ಇತಿಮಿತಿ ***

ಆಸೆಗಳ ಸುಳಿಗೆ ಸಾಲವೂ ಸಾಲದು
ಅವಿವೇಕದಿಂ ರೋದನವೇ ಗತಿ ನಿನಗೆ
ದುಡಿ – ಸುಕಿಸು ಇತಿಮಿತಿಯೊಳಗೆ
ಮತಿ ಅರಿತು ಬದುಕು ಮುದ್ದು ಮನಸೆ

*** ಹೆಸರು ***

ಬೂ ಸೂರ‍್ಯ ಚಂದ್ರಾದಿಗಳಿಗಿಲ್ಲ ಹೆಸರು
ಕ್ರುತಿಯೊಳಗೆ ಹುಳುವಾಗಿ ಮೆರೆಯುತಿಹರು
ಹೆಸರಿಲ್ಲದುಸಿರಿಗೆ ಏಕೆ ಹೆಸರು
ಹೆಸರಿರದೆ ಹಸಿರಾಗು ಮುದ್ದು ಮನಸೇ

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *