ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ.

ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current) ಪಡೆಯಲು ಜಗತ್ತಿನ ಹಲವೆಡೆ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಇತ್ತೀಚಿನ ಸೇರ‍್ಪಡೆ ಗಾಳಿಪಟದಿಂದ ಮಿಂಚು ಪಡೆಯುವ ಚಳಕ.

Makani Turbine

ಕೆಲಸ ಮಾಡುವ ಬಗೆ:

ಗಾಳಿಪಟದಲ್ಲಿ ಎರಡು ಚಕ್ರಗಳನ್ನು ಅಳವಡಿಸಿ ಬಾನಿನಲ್ಲಿ ಹಾರಿಸಲಾಗುತ್ತದೆ. ಬಾನಿನಲ್ಲಿ ಹಾರುವಾಗ ಗಾಳಿಪಟದಲ್ಲಿರುವ ಚಕ್ರಗಳು ಗಾಳಿಯ ಕಸುವಿಗೆ ತಿರುಗ ತೊಡಗುತ್ತವೆ. ಚಕ್ರಗಳ ತಿರುಗುವಿಕೆಯನ್ನು ಚಿಕ್ಕ ಜನರೇಟರಗೆ ಸಾಗಿಸಿ ಮಿಂಚು ಪಡೆಯಲಾಗುತ್ತದೆ. ಹೀಗೆ ಬಾನಿನಲ್ಲಿ ಹಾರುತ್ತಿರುವ ಗಾಳಿಪಟದಲ್ಲಿ ಉಂಟುಮಾಡಲಾದ ಕರೆಂಟನ್ನು ಗಾಳಿಪಟಕ್ಕೆ ಕಟ್ಟಿರುವ ಮಿಂಚು ಸಾಗಿಸಬಲ್ಲ (electric conductor), ದಾರದಂತೆ ಕಾಣುವ ತಂತಿಯಿಂದ ಕೆಳಗೆ ಕಳುಹಿಸಲಾಗುತ್ತದೆ.

gaLipata_minchu

ಮಕನಿ ಪವರ್ ಎಂಬ ಸಂಸ್ತೆ ಇದನ್ನು ಮಾಡಿದ್ದು, ಬಿಸಿಸುದ್ದಿ ಎಂದರೆ ಈ ಸಂಸ್ತೆಯನ್ನು ಈಗ ಗೂಗಲ್ ಕೊಂಡುಕೊಂಡಿದೆ! ಗೂಗಲ್ ಈಗಾಗಲೇ ಗಾಳಿಚಕ್ರಗಳಿಂದ ಮಿಂಚು ಪಡೆಯುವ ಹಲವು ಯೋಜನೆಗಳಲ್ಲಿ ಹಣ ತೊಡಗಿಸಿದ್ದು, ತಾನು ಬಳಸುವ ಕರೆಂಟು ವಾತಾವರಣಕ್ಕೆ ತೊಡಕುಂಟು ಮಾಡದ ಮೂಲಗಳಿಂದ ಬಂದರೆ ಹೆಚ್ಚು ಸೂಕ್ತ ಅನ್ನುವ ನಿಲುವು ಹೊಂದಿದೆಯಂತೆ.

ಈ ಸುದ್ದಿ ಓದಿದಾಗ ಅನಿಸಿದ್ದು…ಆಗ: ಮಿಂಚು ಕಂಡುಹಿಡಿದದ್ದು ಗಾಳಿಪಟ ಹಾರಿಸುವಾಗ. ಈಗ : ಗಾಳಿಪಟ ಹಾರಿಸಿ ಮಿಂಚು ಪಡೆಯಲಾಗುತ್ತಿದೆ.

ಅರಿಮೆಯ ಚಕ್ರ ತಿರುಗುತ್ತಿದೆ, ಎಲ್ಲೆಡೆ ತನ್ನ ಬೆಳಕು ಚೆಲ್ಲುತ್ತ.

ಸುದ್ದಿಸೆಲೆhttp://www.popsci.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: