ಮಲೆನಾಡಿನ ಮೀನು ಸಾರು

ರೇಶ್ಮಾ ಸುದೀರ್.

fish_curry(3)

ಬೇಕಾಗುವ ಪದಾರ್‍ತಗಳು:
ಮೀನು(ಕಾಟ್ಲ) – 1ಕೆ.ಜಿ
ಅಚ್ಚಕಾರದ ಪುಡಿ – 8ಟೀ ಚಮಚ
ದನಿಯ ಪುಡಿ – 2ಟೀ ಚಮಚ
ನೀರುಳ್ಳಿ – 2ಗೆಡ್ಡೆ
ಬೆಳ್ಳುಳ್ಳಿ – 1ಗೆಡ್ಡೆ
ಸಾಸಿವೆ – 1/4ಟೀ ಚಮಚ
ಮೆಂತೆ – 5ಕಾಳು
ನಿಂಬೆಹಣ್ಣು – 3
ಎಣ್ಣೆ – 1ಟೇಬಲ್ ಚಮಚ
ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ: ಸಾಸಿವೆ ಮತ್ತು ಮೆಂತೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು, ಇದಕ್ಕೆಅಚ್ಚಕಾರದಪುಡಿ, ದನಿಯಪುಡಿ, 1ಗಡ್ಡೆ ನೀರುಳ್ಳಿ ಮತ್ತು 1ಗಡ್ಡೆ ಬೆಳ್ಳುಳ್ಳಿಗೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಇನ್ನೊಂದು ಗೆಡ್ಡೆ ನೀರುಳ್ಳಿಯನ್ನು ತೆಳುವಾಗಿ ಉದ್ದಕ್ಕೆ ಹೆಚ್ಚಿಕೊಳ್ಳಿ. ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ನೀರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಮಿಕ್ಸಿ ಮಾಡಿಟ್ಟುಕೊಂಡ ಕಾರದ ಮಿಶ್ರಣವನ್ನು ಹಾಕಿ. ಕುದಿ ಬಂದ ಮೇಲೆ ಉಪ್ಪು ಹಾಕಿ, ನಿಂಬೆಹಣ್ಣಿನ ರಸ ಹಾಕಿ. ರುಚಿ ನೋಡಿ ಇನ್ನಶ್ಟು ಉಪ್ಪು ಅತವಾ ಹುಳಿ ಬೀಕೆನಿಸಿದರೆ ಹಾಕಿ(ಮಲೆನಾಡಿನಲ್ಲಿ  ಹುಳಿ ಸಲ್ಪ ಜಾಸ್ತಿ ಹಾಕುತ್ತಾರೆ). ಚೆನ್ನಾಗಿ ಕುದಿ ಬಂದ ಮೇಲೆ ತೊಳೆದು ಶುಚಿ ಮಾಡಿದ ಮೀನು ಹಾಕಿ 10 ನಿಮಿಶ ಬೇಯಿಸಿ. ನೆನಪಿಡಿ, ಮೀನು ಕುದಿಯುವಾಗ ಚಮಚದಲ್ಲಿ ಕಯ್ ಆಡಿಸಬೇಡಿ, ಮೀನು ಕಲಸಿಹೋಗುತ್ತದೆ. ರುಚಿ ನೋಡಿ ಉಪ್ಪು, ಹುಳಿ ಮತ್ತು ಕಾರ ಸಾಕೆನಿಸಿದರೆ ಇಳಿಸಿ. ನೆನಪಿರಲಿ, ಇದಕ್ಕೆ ತಂಗಿನಕಾಯಿ ಹಾಕುವುದಿಲ್ಲ. ಉಪ್ಪು, ಹುಳಿ ಮತ್ತು ಕಾರ ಸಮ ಪ್ರಮಾಣದ ಈ ಮೀನು ಸಾರು ಅಕ್ಕಿ ರೊಟ್ಟಿಯೊಂದಿಗೆ ತಿನ್ನಲು ತುಂಬ ರುಚಿಯಾಗಿರುತ್ತೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: