‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ

supermoon

ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ ಸಮೀಪದಲ್ಲಿ ಹಾದು ಹೋಗುವನು ಇದು ಅಪರೂಪವೇನಲ್ಲ. ಆದರೆ ಇವೆರಡು ಗಟನೆಗಳು ಒಟ್ಟಿಗೆ ಜರಗುವುದು ಅಪರೂಪವೇ ಸರಿ. ಪ್ರತಿ ತಿಂಗಳು ಹುಣ್ಣಿಮೆ ಚಂದ್ರನು ಕಂಡರೂ ಅದು ಬೂಮಿಯ ಸಮೀಪ ಇರುವುದಿಲ್ಲ ಇದಕ್ಕೆ ಕಾರಣ ಚಂದ್ರ ಬೂಮಿಯನ್ನು ಸುತ್ತುವ ಹಾಗೆ ಬೂಮಿಯು ಸೂರ್‍ಯನ ಸುತ್ತ ಸುತ್ತುವುದು.

ಹವ್ದು ಪ್ರತಿ ತಿಂಗಳು ಏಕೆ ಸೂಪರ್‍ ಮೂನ್ ಆಗೋಲ್ಲ ? ಇಂದು ಸೂಪರ್‍ ಮೂನ್ ಎಂದಿಟ್ಟುಕೊಳ್ಳಿ, ದಿನಗಳು ಕಳೆದಂತೆ ಚಂದ್ರನು ತನ್ನ ಮುಕಗಳನ್ನೂ ಬದಲಿಸುತ್ತ ಬೂಮಿಯ ಸುತ್ತುಹೊಡೆಯುವನು 28 ದಿನಗಳ ನಂತರ ಮತ್ತೆ ಹುಣ್ಣಿಮೆ, ಅಲ್ಲಿಗೆ ಚಂದ್ರ ಅವನಿದ್ದ ಸ್ತಳಕ್ಕೆ ಬಂದನಲ್ಲವೇ? ಆದರೆ ಈ ನಡುವೆ ಬೂಮಿಯು ಸೂರ್‍ಯನ ಸುತ್ತುಹೊಡೆಯುತ್ತ ಸಾಗಿರುತ್ತಾನೆ. ಚಂದ್ರನೇನೋ ಹುಣ್ಣಿಮೆಗೆ ಸಿದ್ದ ಆದರೆ ಆಗ ಚಂದ್ರ ಬೂಮಿಗೆ ಸಮೀಪದಲ್ಲಿ ಇರುವುದಿಲ್ಲ.ವರುಶದಲ್ಲಿ ಒಂದು- ಎರಡು ಸೂಪರ್‍ ಮೂನ್ ಗಳಂತೆ ಕಂಡರೂ ಅವುಗಳು ಕೇವಲ ಆ ವರ್‍ಶದ ಹತ್ತಿರದ ಹುಣ್ಣಿಮೆ ಚಂದ್ರವಶ್ಟೇ. 18 ವರ್‍ಶಗಳ ಅಂತರದಲ್ಲಿ ಸೂಪರ್‍ ಮೂನ್ (ಬೂಮಿಗೆ ಅತ್ಯಂತ ಸಮೀಪದ ಹುಣ್ಣಿಮೆ) ಆಗುವುದು.

ಈ ಮದ್ಯ, ಕಳಂಕಕ್ಕೆ ಸಾಕ್ಶಿ ಹುಡುಕುವವರು ಬೂಮಿಯ ಮೇಲೆ ನಡೆಯುವ ಅನಾಹುತಕ್ಕೆ ಸೂಪರ್‍ ಮೂನ್ ಜಂಟಿ ಹಾಕಿ ಅದನ್ನೇ ದೋಶಿಯೆಂದು ಸಾರಿದ್ದಾರೆ. ಚಂದ್ರನಿಗೂ ಬೂಮಿಯ ಮೇಲೆ ನಡೆಯುವ ಅನಾಹುತಗಳಿಗೆ ಯಾವುದೇ ಸಂಬಂದವಿಲ್ಲ. ಹೆಚ್ಚೆಂದರೆ ನಿತ್ಯ ಹುಣ್ಣಿಮೆಯಂದು ಮಹಾಸಾಗರದಲ್ಲಿ ಹುಟ್ಟುವ ಅಲೆಗಳು ಒಂದು ಇಂಚಿನಶ್ಟು ಮಾತ್ರ ಹೆಚ್ಚುತ್ತದೆ, ಇಂದರಿಂದ ಯಾವುದೇ ಹಾನಿಯಾಗದು.

ಅದೇನೇ ಇರಲಿ, ಸೂಪರ್‍- ಮೂನ್ ಹುಟ್ಟುವಾಗ ಪೂರ್‍ವದಲ್ಲಿ ಹಾಗು ಮುಳುಗುವಾಗ ಪಶ್ಚಿಮದಲ್ಲಿ, ಬೂಮಿಯ ಮೇಲಿನ ಗಿಡ ಮರಗಳ ನಡುವೆ, ಕಟ್ಟಡಗಳ ಹಿಂದೆ ನೋಡಿದಾಗ ಸುಂದರವಾಗಿ ಕಾಣುವುದಂತು ನಿಜ.

(ಚಿತ್ರ: http://www.core77.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಒಳ್ಳೆಯ ಬರಹ…ಚೆನ್ನಾಗಿದೆ.

ಅನಿಸಿಕೆ ಬರೆಯಿರಿ: