ನಾಳೆ ಏರಲಿದೆ INSAT-3D

– ಪ್ರಶಾಂತ ಸೊರಟೂರ.

ಬಾನರಿಮೆಯಲ್ಲಿ ಇಸ್ರೋ ಇನ್ನೊಂದು ಮಯ್ಲಿಗಲ್ಲು ನೆಡಲು ಅಣಿಯಾಗಿದೆ. ನಾಳೆ 26.07.2013, ಬೆಳಿಗ್ಗೆ 1.23 ರಿಂದ 2.41 ಕ್ಕೆ INSAT-3D ಸುತ್ತುಗ (satellite) ಪ್ರಾನ್ಸಿನ ಪ್ರೆಂಚ್ ಗಯಾನಾ ಏರುನೆಲೆಯಿಂದ ಬಾನಿಗೆ ಚಿಮ್ಮಲಿದೆ.

INSAT-3D

ಈ ಸರಣಿಯಲ್ಲಿ ಮೊದಲಿನ ಸುತ್ತುಗಗಳಾದ ’ಕಲ್ಪನಾ’ ಮತ್ತು ’INSAT-3A’ ಗಿಂತ ಹೆಚ್ಚಿನ ಅಳವು ಹೊಂದಿರುವ INSAT-3D, ಮಾಹಿತಿ ಮತ್ತು ಚಿತ್ರಗಳನ್ನು ಒದಗಿಸುವ ಮೂಲಕ ಮುಕ್ಯವಾಗಿ ಈ ಕೆಳಗಿನ ಕೆಲಸಗಳನ್ನು ಮಾಡಲಿದೆ,

1)  ನೆಲದ ಸುತ್ತಾವಿ, ಮಳೆ, ಬಿರುಗಾಳಿ ಮುನ್ಸೂಚನೆ ಕುರಿತ ಅರಕೆಗೆ ನೆರವಾಗುವುದು.

ಎತ್ತುಗೆಗೆ: ಮೋಡಗಳ ಪಾಡು, ಕಡಲ ಮೇಲ್ಮೆಯ ಗಾಳಿಯ ಪಾಡು ಮುಂತಾದವು

2) ನೆರೆಹಾವಳಿಯಂತಹ ತೊಡಕಿನ ಸಂದರ‍್ಬಗಳಲ್ಲಿ ಕಾವಲುಪಡೆಗಳಿಗೆ ನೆರವು ನೀಡುವಂತ ಕೆಲಸ.

ನೆಲದಿಂದ ಏರುವಾಗ INSAT-3D ತೂಕ 2060 kg ಆಗಿದ್ದು ಅದರಲ್ಲಿ ಸುತ್ತುಗವನ್ನು ಗೊತ್ತುಪಡಿಸಿದ ನೆಲೆಯಲ್ಲಿ ಅಣಿಗೊಳಿಸಲು ಬಳಕೆಯಾಗುವ ಉರುವಲುವಿನ ತೂಕ 1125 kg ಆಗಿದೆ.

ಏರುನೆಲೆಯಿಂದ (launch pad) ಬಾನಿಗೆ ಚಿಮ್ಮಿ, INSAT-3D ಕೊನೆಯ ಹಂತದಲ್ಲಿ ’ನೆಲನೆಲೆಸಿದ ತಿರುಗುದಾರಿಯಲ್ಲಿ’ (geostationary orbit) ನೆಲದ ಸುತ್ತ ತಿರುಗಲಿದೆ.

ಕೆಲವು ನಾಳುಗಳ ಹಿಂದಶ್ಟೇ ಅಮೇರಿಕಾದ GPS ನಂತಹ ಏರ‍್ಪಾಟನ್ನು ಕಟ್ಟಲು, IRNSS-1A ಹಾರಿಸಿದ ಇಸ್ರೋ INSAT-3D ಮೂಲಕ ಬಾನಂಗಳದಲ್ಲಿ ಇನ್ನೊಂದು ಹೆಜ್ಜೆ ಇಡಲು ಸಜ್ಜಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 05/01/2014

    […] ಬೆನ್ನಿಗೆ ಇತ್ತೀಚಿನ ಮಂಗಳಯಾನ, IRNSS-1A, INSAT-3D ಹಮ್ಮುಗೆಗಳ ಗೆಲುವಿನ ಬೆಂಬಲವಿದ್ದರೂ GSLV […]

ಅನಿಸಿಕೆ ಬರೆಯಿರಿ:

Enable Notifications