ಇದಕ್ಕೆ ಕಾಸಿಲ್ಲ!

ವಿವೇಕ್ ಶಂಕರ್.

osx-free-660x433

ಮೇಲಿನ ತಲೆಬರಹ ನೋಡಿ ಬೆರಗು ಉಂಟಾಗಿದಿಯೇ? ನಮಗೆಲ್ಲ ಗೊತ್ತಿರುವಂತೆ ಎಣ್ಣುಕಗಳು ಓಡುವುದಕ್ಕೆ ಬೇಕಾಗಿರುವುದು ನಡೆಸೇರ‍್ಪಾಡು (operating systems) ಆದರೆ ಇವುಗಳ ಬೆಲೆ ತುಂಬಾ ಹೆಚ್ಚು ಅಂತಾನೂ ಗೊತ್ತು ಆದರೆ ಇತ್ತೀಚೆಗೆ ಆಪೆಲ್ (Apple) ಕೂಟವೂ ಈ ನಿಟ್ಟಿನಲ್ಲಿ ಬೆರಗುಗೊಳಿಸುವ ಸುದ್ದಿ ತಂದಿದೆ. ಅದೇನೆಂದರೆ ಅವರ ಹೊಸ ನಡೆಸೇರ‍್ಪಾಡಾದ ಮ್ಯಾಕ್ ಓ.ಎಸ್ 10.9 ಮಾವರಿಕ್ಸ್ (OS X 10.9 Mavericks) ಕಾಸಿಲ್ಲದೆ, ಬಿಟ್ಟಿಯಾಗಿ ದೊರೆಯಲಿದೆಯಂತೆ!

ಆಪೆಲ್‍ನ ಹದಿನಾರು ಏಡುಗಳ ಹಿನ್ನಡವಳಿಯಲ್ಲಿ ಹೀಗೆ ’ಕಾಸಿಲ್ಲದೇ ಕೊಡುವ’ ತೀರ‍್ಮಾನ ಮಾಡಿದ್ದು ಇದೇ ಮೊದಲು. ಮೊದಲಿಗೆ ಕೇಳಿದರೆ ಇದು ಬೆರಗು ಉಂಟುಮಾಡಿದರೂ ಹಾಗೆ ಸುಮ್ಮನೆ ತೆಗೆದುಕೊಂಡ ತೀರ‍್ಮಾನವಲ್ಲ. ಇದರ ಹಿಂದಿನ ಗುಟ್ಟೇನು ಅಂತ ತಿಳಿದುಕೊಳ್ಳೋಣ.

ನಡೆಸೇರ‍್ಪಾಡು, ಹಿಂದೆ ಎಣ್ಣುಕದ ಬೇರೆ ಮೆದುಸರಕು (software) ಹಾಗೂ ಗಟ್ಟಿಸರಕಿನ (hardware) ಜೊತೆ ಬರುತ್ತಿತ್ತು. ಹಾಗಾಗಿ ಎಣ್ಣುಕದ ಮೊತ್ತದ ಬೆಲೆಯಲ್ಲಿ ಈ ನಡೆಸೇರ‍್ಪಾಡಿನ ಬೆಲೆ ಕೂಡ ಸೇರಿರುತ್ತಿತ್ತು. ಹೀಗೆ ಮಕ್ರೋಸಾಪ್ಟ್ ಹಾಗೂ ಆಪಲ್ ಕೂಟಗಳು ಸುಮಾರು ದುಡ್ಡು ಗಳಿಸಿದರು. ಆಮೇಲೆ ಮಡಿಲೆಣ್ಣುಕಗಳು (laptops) ಕೂಡ ಬಿಡುಗಡೆಯಾದವು. ಅದರ ನಡೆಸೇರ‍್ಪಾಡು ಅವುಗಳ ಜೊತೆನೇ ಬರುತ್ತಿತ್ತು.

ಇತ್ತೀಚೆಗೆ ಅಲೆಯುಲಿಗಳು, ಅಲೆಯುಲಿ ಮತ್ತು ಎಣ್ಣುಕ ಎರಡೂ ಕೆಲಸಗಳನ್ನು ಒಟ್ಟಾಗಿ ಮಾಡುವ ಚೂಟಿಯುಲಿಗಳೂ  (smart phones)  ಹೊರಬಂದವು. ಈ ಚೂಟಿಗಳಿಗೆ ಗೂಗಲ್ ನಡೆಸೇರ‍್ಪಾಡನ್ನು ದುಡ್ಡಿಲ್ಲದೆ ಒದಗಿಸಿತು.

ಇತ್ತೀಚೆಗೆ ಚೂಟಿಯುಲಿಗಳ ಬಳಕೆ ತುಂಬಾ ಹೆಚ್ಚಾಗಿದ್ದು, ಅವುಗಳ ಮಾರಾಟವೂ ತುಂಬಾ ಹೆಚ್ಚಾಗಿದೆ. ಇದರಿಂದ ಎಣ್ಣುಕಗಳ ಹಾಗೂ ಮಡಿಲೆಣ್ಣುಕಗಳ ಬಳಕೆ ಕಡಿಮೆ ಆಗುತ್ತಾ ಬಂದಿವೆ. ಮಾರುಕಟ್ಟೆಯಲ್ಲಿ ತಮ್ಮ ಹಿಡಿತ ಎಲ್ಲಿ ಕಳೆದುಕೊಳ್ಳಬೇಕಾಗುತ್ತದೆಯೋ ಅಂತಾ ತಿಳಿದ ಆಪೆಲ್ ಕೂಟ ತಮ್ಮ ಈ ಹೊಸ ನಡೆಸೇರ‍್ಪಾಡನ್ನು ಕಾಸಿಲ್ಲದೆ ಬಿಡುಗಡೆ ಮಾಡುತ್ತಿದೆ.

ಮುಂಚೆ ತಮ್ಮ ನಡೆಸೇರ‍್ಪಾಡಿಗೆ ದುಡ್ಡನ್ನು ಮಾಡಿದ ಹಾಗೆ ಈಗಲೂ ಈ ಬಗೆಯಲ್ಲಿ ದುಡ್ಡನ್ನು ಮಾಡುವುದಕ್ಕೆ ಹೋದರೆ ತಮ್ಮ ಮಾರುಕಟ್ಟೆಯ ಹಿಡಿತ ಕಡಿಮೆಯಾಗುಬಹುದೆಂದು ಆಪಲ್‍ಗೆ ಈಗ ಮನವರಿಕೆಯಾಗಿದೆ. ಒಟ್ಟಿನಲ್ಲಿ ಆಪೆಲ್ ಕೂಟದ ಈ ತೀರ‍್ಮಾನವು ಹೊಸದೊಂದು ಅಲೆಯನ್ನು ಎಬ್ಬಿಸಲಿದೆ.

(ಒಸಗೆ ಹಾಗೂ ತಿಟ್ಟದ ಸೆಲೆ: www.wired.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: