ಇದನ್ನು ಕಟ್ಟಿದವರಿಗೆ ಸೀರುಂಡೆ!

ವಿವೇಕ್ ಶಂಕರ್.

ku-bigpic

ಇತ್ತೀಚೆಗೆ ಮಿಂಬಲೆಯು (internet) ನಮ್ಮೆಲ್ಲರ ಬಾಳಿನಲ್ಲಿ ಒಂದು ದೊಡ್ಡ ಪಾಂಗು (role) ಪಡೆಯುತ್ತಿದೆ. ಮಿಂಬಲೆಯ ಮೂಲಕ ಹಲವು ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ಆದರೆ ಅದೇ ಮಿಂಬಲೆಗೆ ಕಳ್ಳರು ಕೂಡ ಬಲೆ ಬೀಸುತ್ತಿದ್ದಾರೆ. ಮಿಂಗಳ್ಳರ (hackers) ಮಿಂಗಳ್ಳತನದಿಂದ (hacking) ತುಂಬಾ ಹಾನಿಯುಂಟಾಗುತ್ತಿದೆ. ಅಮೇರಿಕಾದ ಕಾವಲು ಕೂಟ ಪೆಂಟಗಾನ್ ಕೂಡಾ ಇಂತ ತೊಂದರೆಗಳಿಂದ ನರಳುತ್ತಿದ್ದು, ಅದನ್ನು ಎದುರಿಸಲು ಡಿ.ಎ.ಆರ್.ಪಿ.ಎ. (DARPA) ಅವರ ನೆರವನ್ನು ಕೋರಿದ್ದಾರೆ.

ಡಿ.ಎ.ಆರ್.ಪಿ.ಎ., ಅಮೇರಿಕಾ ಕಾವಲಿನ ಮತ್ತೊಂದು ನುರಿತ ಏಜನ್ಸಿ. ಅಮೇರಿಕಾ ಪಡೆಯ (army) ಬಳಕೆಗಾಗಿ ಹೊಸ ಚಳಕಗಳನ್ನು ಕಟ್ಟುವುದಕ್ಕಾಗಿ 1958 ರಲ್ಲಿ ಇದನ್ನು ಹುಟ್ಟುಹಾಕಲಾಯಿತು. ಡಿ.ಎ.ಆರ್.ಪಿ.ಎ. ಈಗ ಒಂದು ಪೋಟಿಯನ್ನು ಸಾರಿದೆ, ಅದೇನೆಂದರೆ ಮಿಂಗಳ್ಳ-ತಡೆಯ ಏರ‍್ಪಾಡನ್ನು ಕಟ್ಟಿದವರಿಗೆ ಎರಡು ಮಿಲಿಯನ್ ಡಾಲರ್ (ಸುಮಾರು ಹನ್ನೆರಡು ಕೋಟಿ ರೂಪಾಯಿಗಳು) ಮೆಚ್ಚು (prize) ನೀಡಲಾಗುವುದಂತೆ!

ಈ ಪೋಟಿಯು ಮುಂದಿನ ಮೂರು ಏಡುಗಳು (ವರುಶಗಳು) ನಡೆಯುತ್ತದೆ. ಆದರೆ ಇದರ ಬೇಡಿಕೆಗಳು ಸಣ್ಣದಲ್ಲ, ಈಗ ಹೊರಬರುವ ಏರ‍್ಪಾಡು ಹಿಂದೆ ಮಿಂಗಳ್ಳ-ತಡೆಗಳ ಹಾಗೆ ಇರಬಾರದು. ಇದು ಮಂದಿ ಅಳುವಿನ ಎಲ್ಲೆಗಳನ್ನು ದಾಟಿ ಎಲ್ಲಾ ಬಗೆಯ ಮಿಂಗಳ್ಳತನಗಳನ್ನು ಕೆಲವು ಗಂಟೆಯೊಳಗೆ ಇಲ್ಲವೇ ಕೆಲವು ಚಣಗಳಲ್ಲೇ ತಡೆಯಲೇಬೇಕು. ನೋಡುವುದಕ್ಕೆ ಬರಿ ಕೆಲವು ಹಮ್ಮುಗೆಗಳ ಏರ‍್ಪಾಡು ಅಂತ ಅನ್ನಿಸಿದರೂ, ಎಂದಿನ ಚಳಕಗಳನ್ನು ಮೀರಿದ ಮೊಗಸುಗಳು ಮಾತ್ರ ಗೆಲುವು ನೀಡಲಿದೆ ಎಂಬುದನ್ನು ಗಮನದಲ್ಲಿಡಬೇಕು.

ಹಿಂದೆ 2004 ರಲ್ಲಿ ಓಡಿಸುಗನಿಲ್ಲದ ಕಾರು (driver less car) ಕಟ್ಟುವ ಪೋಟಿಯನ್ನು ಡಿ.ಎ.ಆರ್.ಪಿ.ಎ. ಸಾರಿದ್ದರು. ಈಗ ಓಡಿಸುಗನಿಲ್ಲದ ಕಾರು ನನಸಾಗುವ ಸುದ್ದಿಗಳು ಎಲ್ಲೆಡೆ ಕೇಳಿಬರುತ್ತಿವೆ. ಈಗ ಮಿಂಗಳ್ಳ ತಡೆಯ ಈ ಕೋರಿಕೆಗೆ ಮಂದಿ ಹೇಗೆ ಮರುನುಡಿಯುತ್ತಾರೋ ಕಾದು ನೋಡೋಣ.

ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ ತಪ್ಪದೇ ಪಾಲ್ಗೊಳ್ಳಿ. ಗೆದ್ದರೆ 12 ಕೋಟಿ ರೂಪಾಯಿಗಳು, ಯಾರಿಗುಂಟು, ಯಾರಿಗಿಲ್ಲ!

(ಒಸಗೆಯ ಮತ್ತು ತಿಟ್ಟದ ಸೆಲೆ: gizmodo.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks