ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ.

malala_670_nighat_dad

ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ ಜೀವನಕ್ಕೆರಡು ಅನ್ವಯಿಸುತ್ತದೆ. ಬೂಮಿಯ ಮೇಲೆ ಬದುಕಲು ಪ್ರತಿನಿತ್ಯ ಎಲ್ಲ ಜೀವಿಗಳು ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸುತ್ತಿರುತ್ತವೆ. ಹೋರಾಟವಿಲ್ಲದೆ ಬದುಕುವುದೆಂದರೆ ಇನ್ನೊಬ್ಬರ ಗುಲಾಮರಾಗಿ ಬದುಕುವುದು, ಇಲ್ಲವೇ ಅವರ ದಬ್ಬಾಳಿಕೆಗೆ ಬಲಿಯಾಗುವುದು.

ನಾವು ಬೂಮಿಯ ಮೇಲೆ ಜನ್ಮವೆತ್ತುವಕ್ಕಿಂತಲು ಮೊದಲೆ ನಮ್ಮ ಹೋರಾಟ ತಾಯಿ ಗರ್‍ಬದಲ್ಲೇ ಇತರ ದಾತುಗಳೊಡನೆ ಪಯ್ಪೋಟಿ ಮಾಡಿ ಗೆಲ್ಲುವುದರಿಂದ ನಮ್ಮ ಜಿವಾಂಕುರದ ಪ್ರತಮ ಗಟ್ಟ ಪ್ರಾರಂಬವಾಗುತ್ತದೆ. ನಾವು ಜನ್ಮಜಾತ ಹೋರಟಗಾರರು ಎನ್ನುವುದನ್ನು ಮರೆಯಬಾರದು. ಅದೇನೆ ಇದ್ದರೂ, ಬೆಳೆದು ದೊಡ್ಡವರಾದಂತೆ, ನಮ್ಮ ಜೀವನವನ್ನು ಸಂರಕ್ಶಿಸಿಕೊಳ್ಳಲು, ಹೋರಾಟ ಮನೋಬಾವನೆಯನ್ನು ತೊರೆದು,ನಮ್ಮ ಸುತ್ತಮುತ್ತಲಿನವರು ಎಂತವರೇ ಆಗಿದ್ದರು ಅವರ ಜೊತೆಗೆ ಎಲ್ಲರೀತಿಯ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತ ಜೀವನ ನಡೆಸಿಕೊಂಡು ಹೋಗುತ್ತೇವೆ. ಆದರೆ ಎಲ್ಲರೂ ಇದೆ ಮನೊಬಾವನೆಯನ್ನು ಹೊಂದಿದರೆ ಒಂದು ಒಳ್ಳೆಯ, ಸ್ವಾಸ್ತ್ಯ ಹಾಗೂ ಸಂಸ್ಕಾರಯುತ ಸಮಾಜವನ್ನು ಕಟ್ಟಲಾಗದು.

ಇವತ್ತಿನ ನಮ್ಮ ಈ ಸ್ವತಂತ್ರ ಜೀವನ, ಹಲವಾರು ಮಹನೀಯರು ಮಾಡಿದ ಹೋರಾಟದ ಪಲ ಎನ್ನುವುದನ್ನು ಮರೆಯಬಾರದು. ಸಾಮಾಜಿಕ ಪಿಡುಗುಗಳ ವಿರುದ್ದ ಇಂದಿಗೂ ಅಣ್ಣಾ ಹಜಾರೆಯವರಂತಹ ವ್ಯಕ್ತಿಗಳು ಹೋರಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ನೀತಿ ಹೇಳುವವರ ಮನೆಯಲ್ಲಿ ನೀರು ಕೂಡಿಯಲೂ ಸಿಗುವುದಿಲ್ಲವೆಂದು, ಹೊರಾಟವನ್ನು ಬೆಂಬಲಿಸದೆ ಅದರಿಂದ ದೂರ ಸರಿಯುವವರೆ ಹೆಚ್ಚಾಗುತ್ತಿರುವುದು ವಿಶಾದನೀಯ.

ಕೆಲುವು ತಿಂಗಳುಗಳಿಂದ ನಮ್ಮ ನೆರೆಯ ದೇಶ ಪಾಕಿಸ್ತಾನದ ಒಬ್ಬ ಪುಟ್ಟ ಬಾಲಕಿಯ ಹೋರಾಟದ ಹಾದಿಯನ್ನು ನೋಡಿ, ಓದಿ ರೋಮಾಂಚನವೆನಿಸಿತು, ದಟ್ಟ ದಾರಿದ್ರ್ಯಗಳಾದ ತಾಲಿಬಾನಿಗಳಂತಹ ಕೆಸರಿನಿಂದ ತುಂಬಿದ ಪಾಕಿಸ್ತಾನದ ಸ್ವಾತ್ ಎನ್ನುವ ಪ್ರಾಂತ್ಯದಲ್ಲಿ ಹುಟ್ಟಿದ ಒಂದು ಕಮಲವದು. ಅವಳ ಹೆಸರು ಮಲಾಲಾ ಯೂಸುಪ್‍ಜಾಯ್. ಹುಟ್ಟಿನಿಂದಲೇ ಹೋರಾಟದ ಮನೋಬಾವನೆಯನ್ನು ತಂದೆಯಿಂದ ಪಡೆದುಕೊಂಡವಳು. ಸ್ತ್ರೀ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವ ಪಾಕ್‍ನ ಮೂಲಬೂತವಾದಿಗಳ ವಿರುದ್ದ ಚಿಕ್ಕವಯಸ್ಸಿನಲ್ಲೇ ದನಿಯೆತ್ತಿದ ಹೋರಾಟಗಾರ್‍ತಿಯವಳು.

ಶಿಕ್ಶಣ ನಮ್ಮ ಹಕ್ಕು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾದ್ಯವಿಲ್ಲ ಎಂದ ಮಲಾಲಾ ತಾಲಿಬಾನಿಗಳ ಗುಂಡೇಟಿಗೂ ಹೆದರಲಿಲ್ಲ. ಅವಳ ಈ ದಯ್ರ್ಯವನ್ನು ಮೆಚ್ಚಿ ವಿಶ್ವ ಸಂಸ್ತೆ ಅವಳಿಗೆ ಅಹ್ವಾನವಿತ್ತು ವಿಶ್ವ ಸಂಸ್ತೆಯ ಸಬೆಯನ್ನುದ್ದೇಶಿಸಿ ಮಾತನಾಡಲು ಜುಲಯ್ 12, 2013ರಂದು ಅವಕಾಶ ಕೊಟ್ಟಿತು. ಮಲಾಲಾ ಮಾಡಿದ ಬಾಶಣದಲ್ಲಿ ಅವಳ ದಯ್ರ್ಯ, ಶಿಕ್ಶಣ ಪ್ರೇಮ ಹಾಗೂ ಹೋರಾಟದ ಮನೋಬಾವನೆ ಎದ್ದು ಕಾಣುತ್ತಿತ್ತು.

ಬಾಶಣದ ಮೊದಲು ಸಬೆಯಲ್ಲಿ ನೆರೆದಿದ್ದ ಎಲ್ಲರಿಂದ ಹಿಡಿದು ತನಗೆ ಗುಂಡೇಟಿನಿಂದ ಗಾಯವಾದಾಗ ಆಸ್ಪತ್ರೆಯಲ್ಲಿ ಉಪಚರಿಸಿದ ವಯ್ದ್ಯರವರೆಗೆ ಎಲ್ಲರಿಗೂ ದನ್ಯವಾದಗಳನ್ನು ಅರ್‍ಪಿಸಿದಳು. ವಿಶ್ವದಾದ್ಯಂತ ನೂರಾರು ಜನ ಮಾನವ ಹಕ್ಕುಗಳ ಹೋರಾಟಗಾರರಿದ್ದಾರೆ, ನಾನು ಅವರಲ್ಲೊಬ್ಬಳು ಮಾತ್ರ. ಅಕ್ಟೊಬರ್ 9, 2012ರಂದು ನನ್ನ ಹಣೆಯ ಎಡಬಾಗದ ಮೇಲೆ ತಾಲಿಬಾನಿಯೊಬ್ಬ ಗುಂಡುಹಾರಿಸಿದ, ಅವರು ನನ್ನ ಸ್ನೇಹಿತರ ಮೇಲೂ ಗುಂಡುಹಾರಿಸಿದರು. ಇದು ನಮ್ಮನ್ನು ಮವ್ನವಾಗಿಸುತ್ತದೆಂದು ತಿಳಿದುಕೊಂಡಿದ್ದರು ಬದಲಾಗಿ ಸಾವಿರಾರು ಹೋರಾಟದ ದ್ವನಿಗಳು ಹುಟ್ಟಿಕೊಂಡವು.

ಬಯೋತ್ಪಾದಕರು ನನ್ನ ಗುರಿಯನ್ನು ಬದಲಿಸಿ ನನ್ನ ಮಹತ್ವಾಕಾಂಕ್ಶೆಗಳನ್ನು ತಡೆಯಬಹುದೆಂದುಕೊಂಡಿದ್ದರು. ಆದರೆ ಬದಲಾಗಿದ್ದು ಮಾತ್ರ ಇದು, “ನಿಶ್ಯಕ್ತಿ, ಅದಯ್ರ್ಯ ಮತ್ತು ಹತಾಶ ಪರಿಸ್ತಿತಿ ಕೊನೆಗೊಂಡಿತು. ಶಕ್ತಿ, ಸಾಮರ್‍ತ್ಯ  ಮತ್ತು ಎದೆಗಾರಿಕೆ ಹುಟ್ಟಿಕೊಂಡಿತು.” ಇದರ ಹೊರತು ಬೇರೇನೂ ನನ್ನಲ್ಲಿ ಬದಲಾಗಿಲ್ಲ, ನಾನು ಇಗಲೂ ಅದೇ ಗುರಿ ಮತ್ತು ಮಹತ್ವಾಕಾಂಕ್ಶೆಗಳನ್ನು ಹೊಂದಿರುವ ಮಲಾಲಾ. ಆ ಸಂದರ್‍ಬದಲ್ಲಿ ನನ್ನ ಹತ್ತಿರ ಸಹ ಬಂದೂಕು ಇದ್ದಿದ್ದರೆ ನಾನು ಅವನ ಮೇಲೆ ತಿರುಗಿ ಗುಂಡು ಹಾರಿಸುತ್ತಿರಲಿಲ್ಲ, ಈ ದಯಾಗುಣವನ್ನು ನಾನು ಬಗವಾನ ಬುದ್ದ, ಯೇಸು ಕ್ರಿಸ್ತ ಹಾಗೂ ಪ್ರವಾದಿ ಮೊಹಮ್ಮದರಿಂದ ಕಲಿತಿದ್ದೇನೆ, ಈ ಬದಲಾವಣೆಯ ಪರಂಪರೆಯನ್ನು ನಾನು ಮಾರ್‍ಟಿನ್ ಲೂತರ್ ಕಿಂಗ್, ನೆಲ್ಸನ್ ಮಂಡೇಲಾರಂತಹ ವ್ಯಕ್ತಿಗಳಿಂದ ಬಳುವಳಿಯಾಗಿ ಪಡೆದುಕೊಂಡಿದ್ದೇನೆ, ಈ ಅಹಿಂಸೆಯ ತತ್ವವನ್ನು ನಾನು ಮಹಾತ್ಮಾ ಗಾಂದಿ, ಬಚಾ ಕಾನ್ ಮತ್ತು ಮದರ್ ತೆರೆಸಾರವರಂತಹ ಮಹಾನ್ ವ್ಯಕ್ತಿಗಳಿಂದ ಕಲಿತಿದ್ದೇನೆ. ಆದ್ದರಿಂದ ನಾವೆಲ್ಲ ಒಟ್ಟುಗೂಡಿ, ಅನಕ್ಶರತೆ, ಬಡತನ ಹಾಗೂ ಬಯೋತ್ಪಾದನೆಯ ವಿರುದ್ದ ಮಹತ್ವದ ಹೋರಾಟ ಪ್ರಾರಂಬಿಸ ಬೇಕಾಗಿದೆ. ಅದಕ್ಕಾಗಿ ನಾವು ಪುಸ್ತಕ ಮತ್ತು ಲೇಕನಿಗಳನ್ನು ಕಯ್ಗೆತ್ತಿಕೊಳ್ಳಬೇಕು, ನಿಜವಾಗಿ ಇವುಗಳೇ ಶಕ್ತಿಶಾಲಿ ಆಯುದಗಳು. ಈ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಶಣವೊಂದೇ ಪರಿಹಾರ, ಒಬ್ಬ ವಿದ್ಯಾರ್‍ತಿ, ಒಬ್ಬ ಶಿಕ್ಶಕ, ಒಂದು ಪುಸ್ತಕ, ಒಂದು ಪೆನ್ನು ಜಗತ್ತನ್ನು ಬದಲಾಯಿಸಬಲ್ಲದು. ಅದಕ್ಕಾಗಿ ಮೊದಲು ಶಿಕ್ಶಣ.

ಹೀಗೆ ಸುಮಾರು 18 ನಿಮಿಶಗಳ ಕಾಲ ಮಾತನಾಡುವಾಗ ಮಲಾಲಾಳ ಪ್ರತಿ ಮಾತಿಗೂ ಸಬಿಕರು ಚಪ್ಪಾಳೆ ತಟ್ಟಿದರು. ಬವಿಶ್ಯದಲ್ಲಿ ಪಾಕಿಸ್ತಾನದ ಪ್ರದಾನಿಯಾಗಬೇಕೆಂಬ ಕನಸನ್ನು ಹೊಂದಿರುವ ಈ ಪುಟ್ಟ ಬಾಲಕಿಯ ದಿಟ್ಟ ಹೆಜ್ಜೆಗಳು ನಿಜವಾಗಲೂ ಶ್ಲಾಗನೀಯ. ನಾವು ಕಾಲ ಗಟ್ಟದಿಂದ ಸ್ವಲ್ಪ ಹಿಂದೆ ಹೋಗುತ್ತಾ ನೋಡಿದರೆ ನಮ್ಮ ದೇಶದಲ್ಲಿ ಕಿರಣ ಬೇಡಿ, ಜಾನ್ಸಿ ರಾಣಿ, ಒನಕೆ ಓಬವ್ವ, ಕಿತ್ತೂರ ಚನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮಳಂತಹ ವೀರವಣಿತೆಯರು ನಮ್ಮ ಕಣ್ಮುಂದೆ ಬಂದು ನಿಲ್ಲುತ್ತಾರೆ, ದಯ್ರ್ಯವೇ ಜೀವನ, ಅದಯ್ರ್ಯವೇ ಮರಣ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನಾವು ಎಂದಿಗೂ ಮರೆಯಬಾರದು.

(ಚಿತ್ರ ಸೆಲೆ: nwhm.org)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s