ಕಂಬನಿಗಳಲ್ಲೂ ಹಲವು ಬಗೆಗಳು!

 ವಿವೇಕ್ ಶಂಕರ್.

ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ ಬಗೆಯಲ್ಲಿ ಕಂಡರೂ ಇವುಗಳೆಲ್ಲ ಒಂದೇ ಬಗೆಯೇ ಎನ್ನುವ ಕೇಳ್ವಿ ರೋಸ್-ಲಿನ್ ಪಿಶರ್ (Rose-Lynn Fisher) ಅವರಲ್ಲಿ ಮೂಡಿತು. ಅವರು ಬೇರೆ ಬೇರೆಯ ಕುಳ್ಳಿಹಗಳಲ್ಲಿ ಮೂಡಿದ ಕಂಬನಿಗಳನ್ನು ಒಂದು ಸೀರುತೋರುಕ(Microscope)ದಲ್ಲಿ ನೋಡಿದಾಗ ಅವರಿಗೆ ಬೆರಗು ಕಾದಿತ್ತು. ಈ ಎಲ್ಲಾ ಕಂಬನಿಗಳು ಮೇಲ್ನೋಟಕ್ಕೆ ಒಂದೇ ಬಗೆಯಲ್ಲಿ ಕಂಡರೂ ಅವುಗಳನ್ನು ಸೀರುತೋರುಕದಲ್ಲಿ ನೋಡಿದಾಗ ಎಲ್ಲಾ ಕಂಬನಿಗಳು ಒಂದೇ ಆಗಿರಲಿಲ್ಲ. ಅವುಗಳಲ್ಲಿ ಹಲವು ಬೇರ‍್ಮೆಗಳು ಕಂಡು ಬಂದವು.

ಜೋಸಪ್ ಸ್ಟ್ರಾಮ್ಬರ‍್ಗ್ (Joseph Stromberg) ಅವರು ಹೇಳುವಂತೆ ಕಂಬನಿಗಳಲ್ಲಿ ಮೂರು ಬಗೆಗಳಿವೆ. ಅವು, ತಳದ(basal), ಅಂಕೆಯಲ್ಲಿಲ್ಲದ(reflex) ಮತ್ತು ಮನದ(psychic) ಕಂಬನಿಗಳು. ನೋವಿನಿಂದ ಬರುವ ಕಂಬನಿಯು ಈರುಳ್ಳಿ ಕತ್ತರಿಸುವಾಗ ಮೂಡಿ ಬರುವ ಕಂಬನಿಯು ಒಂದೇ ಆಗಿರುವುದಿಲ್ಲ. ಎಲ್ಲಾ ಕಂಬನಿಗಳಲ್ಲಿ ಎಣ್ಣೆಗಳು, ದೊಳೆಗಳು(enzymes) ಹಾಗೂ ಸೀರುಗೇಡುಕಗಳು(antibodies) ಉಪ್ಪು ನೀರಿನಲ್ಲಿ ತೇಲಾಡುತ್ತಿರುತ್ತವೆ. ಬೇರೆ ಬೇರೆ ಬಗೆಯ ಕಂಬನಿಗಳಲ್ಲಿ ಬೇರೆ ಬಗೆಯ ಸೀರಕೂಟಗಳು(molecules) ಕಂಡು ಬರುತ್ತವೆ. ಎತ್ತುಗೆಗೆ, ಮನದ ಕಂಬನಿಗಳಲ್ಲಿ ಮುನ್ನಿನ ಸೋರುಗೆಗಳಿರುತ್ತವೆ(protein based hormones), ಅದರಲ್ಲಿ ನರಹರಿಸುಕವಾದ ಲ್ಯೂಚಿನೆ ಎನ್ಕೆಪಾಲಿನ್(neurotransmitter leucine enkephalin) ಕೂಡ ಇರುತ್ತದೆ.

ಕಂಬನಿಗಳು ಬೇರೆ ಬೇರೆಯಾಗಿ ಕಾಣುವುದಕ್ಕೆ ಅದನ್ನು ನೋಡಲು ಬಳಸುವ ಸೀರುತೋರುಕದ ಅಳವಡಿಕೆಯೂ ಕೂಡ ಒಂದು ದೂಸರು, ಯಾಕೆಂದರೆ ಕಂಬನಿಗಳು ಹರಳಿನ ಉಪ್ಪುಗಳಾಗಿರುವುದರಿಂದ(crystallized salt) ಇವು ಹಲವು ಪರಿಜು(Prototype)ಗಳಾಗಿ, ಹಲವು ಬಗೆಗಳಾಗಿ ಕಾಣುತ್ತವೆ. ಒಟ್ಟಿನಲ್ಲಿ ಕಂಬನಿಗಳು, ಇರ‍್ಪರಿಮೆ(chemistry), ಅಳವಡಿಕೆಗಳು(settings), ಜಿಗುಟುತನ(viscosity) ಹಾಗೂ ಸೀರುತೋರುಕದ ಅಳವಡಿಕೆಗಳ ದೂಸರುಗಳಿಂದಾಗಿ ಬೇರೆ ಬೇರೆಯಾಗಿ ಕಾಣುತ್ತವೆ. ಬೆರಳಚ್ಚುಗಳ(fingerprints) ಹಾಗೆ ಎರಡು ಕಂಬನಿಗಳು ಕೂಡ ಬೇರೆ ಬೇರೆ ಎಂದು ತಿಳಿದ ಮೇಲೆ ಬೆರಗು ಉಂಟಾಗುತ್ತದೆ ಅಲ್ವೇ ?

ಸೀರುತೋರುಕದ ಕೆಳಗೆ ಕಂಬನಿಗಳು ಹೇಗೆ ಕಾಣುತ್ತವೆಯೆಂದ ತಿಳಿಯಬೇಕಾದರೆ ಕೆಳಗಿನ ತಿಟ್ಟಗಳನ್ನು ನೋಡಬಹುದು.

nambike
ಬಲ್ಲಮೆ ಮತ್ತು ನಂಬಿಕೆಯ ಕಂಬನಿ (Tears of possibility and hope)
nenapu
ನೆನಪಿನ ಕಂಬನಿ (Tears of remembrance)
iiruLLi
ಈರುಳ್ಳಿಯಿಂದ ಕಂಬನಿ (Tears from onions)
basal
ತಳದ ಕಂಬನಿ (Basal Tears)
ನೋವಿನ ಕಂಬನಿ (Tears of grief)
ನೋವಿನ ಕಂಬನಿ (Tears of grief)

(ಮಾಹಿತಿ ಮತ್ತು ತಿಟ್ಟ ಸೆಲೆ: lifebuzz.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.