ದಿಟಗನ್ನಡ

ಯಶವನ್ತ ಬಾಣಸವಾಡಿ.

barigemane

ಕನ್ನಡಿಗರಾಡುವ ನುಡಿ ಕನ್ನಡ
ದ್ರಾವಿಡ ಬಳಗದ ಕನ್ನಡ
ತೊಡಕೆಂತದು ನುಡಿಯಲು ಕನ್ನಡ
ಇದುವೆ ಆಡುಗನ್ನಡ

ಮೂವತ್ತೆರಡು ಬರಿಗೆಗಳ ಕನ್ನಡ
ಮಹಾಪ್ರಾಣಗಳಿಲ್ಲದ ಸೊಗಡಿನ ಕನ್ನಡ
ಪಾಳ್ಬರಿಗೆಗಳ ಬದಿಗಿಟ್ಟ ಕನ್ನಡ
ಇದುವೆ ಎಲ್ಲರ ಕನ್ನಡ

ಹೆರನುಡಿಗಳ ಹಂಗಿಲ್ಲದ ಕನ್ನಡ
ನುಡಿಬರಿಗೆಗಳಿಗ್ ಒಪ್ಪುವ ಕನ್ನಡ
ಅಳುಕೆಂತದು ಬಳಸಲು ಕನ್ನಡ
ಇದುವೆ ಅಚ್ಚಗನ್ನಡ

ಕೋವಿದರ ಕಟ್ಟಳೆಗಳಿಲ್ಲದ ಕನ್ನಡ
ಎಲ್ಲರಿಗೂ ಎಟುಕುವ ಕನ್ನಡ
ಚುರುಕಿನ ಚೂಟಿಯ ಕನ್ನಡ
ಇದೇ ದಿಟಗನ್ನಡ ದಿಟವಾದ ಕನ್ನಡ

( ಚಿತ್ರ ಸೆಲೆ: ಯಶವನ್ತ ಬಾಣಸವಾಡಿ ) 

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: