ವಿದಿಯ ಬಲೆಯಲ್ಲಿ ಮಮತೆ

– ವಿನಾಯಕ ಕವಾಸಿ.

flood

ಮಾತು ಬರದೆ ನೋವಿನಿಂದ ಮನಸು ಮಿಡಿದಿದೆ
ತಾಯಿತನದಿ ಮಮತೆ ಮೆರೆಯೆ, ಅನುರಾಗ ಹರಿದಿದೆ
ಕೂಳ ಸುಳಿಯಲ್ಲೂ ಒಲವಿನ ಸೆಲೆಯು ತುಂಬಿದೆ
ಅದನ ಕಂಡ ಕಣ್ಣು ಕೂಡ ಕಂಬನಿಯ ಹನಿದಿದೆ

ದನಿಯು ನಡುಗಿದೆ, ಮಾತಿನ ಬಲವು ಕುಂದಿದೆ
ತೋರಿ ಪ್ರಾಣಿ ಬವಣೆ ತಾನೆ, ಚಿಲ್ಲೆಂದು ಒಡೆದಿದೆ
ವಿದಿಯ ಬಲೆಗೆ ಕಲ್ಲು ಕೂಡ ಕರಗಿ ಮರುಗಿದೆ

ಮಾತೆ ಏಕೀ ವಿರಾಟ ರೂಪ
ಇಂತು ನಿನ್ನ ಕ್ರೂರ ವಿಕೋಪ
ಏಕಿದೇಕೆ ಅಕಟಕಟಾ!!!

ನಿನ್ನೀ ಕಣ್ಣೀರೆ ಹಾಲಾಹಲದಂತೆ ಹರಿಯಿತೆ?
ಮಾಣ್, ಸಿಟ್ಟಿನಿಂದ ಬೇಗುದಿಗೆ ಒಡಲು ಬಿರಿಯಿತೆ?
ರುದ್ರ ಪ್ರತಾಪವೇ ಸಿಡಿದು ಕೋಡಿ ಹರಿಯಿತೆ?
ಜೀವಸೆಲೆಗೆ ಆಸರೆ ನೀ, ಮರೆತೆ ಹೋಯಿತೆ?

ಎಂತು ಬಗೆಯಲಿ, ನಿನ್ನ ಏನೆಂದು ಅರಿಯಲಿ
ತೋರಿ ನಿನ್ನ ಚಿತ್ತವಿನಿತು
ಅಕ್ಕರೆಯಿಂದಲಿ ಒಲಿದು
ಸಾಕು ನಿಲ್ಲಿಸೈ, ಈ ಕೇಡಿನಾಟ ಬೇಡವೈ

(ಚಿತ್ರಸೆಲೆ: viralexpose.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: