ಹೊಸ ವರುಶವು ನಲಿವು ತರಲಿ

 ಪ್ರತಿಬಾ ಶ್ರೀನಿವಾಸ್.

HosaVarsha

ಬಾಳ ಹಾದಿಯಲಿ ಬೆಳಕಿಲ್ಲ
ಯಾಕೋ ಕತ್ತಲು ಕಳೆದಿಲ್ಲ
ಹೆಮ್ಮರವಾಗಿ ಬೆಳೆಯುತ್ತಿದೆ ಕಶ್ಟಗಳು
ಮಣ್ಣಲ್ಲಿ ಮಣ್ಣಾಗಿದೆ ಸುಕದ ದಿನಗಳು||

ಅಶ್ಟೋ ಇಶ್ಟೋ ಸಂಪಾದನೆ ಮಾಡುವುದು
ಒಂದಿಶ್ಟು ಸಾಲ ತೀರಿಸುವುದು
ಈ ಮದ್ಯದಲ್ಲೋಂದಿಶ್ಟು ಸಂಬ್ರಮಗಳು
ಸಂಬ್ರಮದೊಳಗೂ ಕಣ್ಣೀರ ಸಂಚಿಕೆಗಳು||

ಪ್ರೀತಿ ಪ್ರೇಮದ ಕಾಳಜಿಯಲ್ಲಿ
ನೋವು ನಲಿವುಗಳ ಹಾವಳಿಯಲ್ಲಿ
ಉರುಳಿ ಹೋಗುತಿದೆ ದಿನಗಳು
ಹೊಸ ವರುಶದ ಬರುವಿಕೆಯಲ್ಲಿ||

ಬಡವರು ಬಡತನದಲ್ಲೆ ಮುಳುಗಿದ್ದಾರೆ
ಸಿರಿವಂತರು ಶ್ರೀಮಂತಿಕೆಯಲ್ಲಿ ಮೇರೆಯುತ್ತಿದ್ದಾರೆ
ಕಪ್ಪು ಬಿಳುಪಿನ ಈ ಬದುಕಲ್ಲಿ
ಬರಲಿ ಬಣ್ಣದ ಬದಲಾವಣೆ||

ದುಕ್ಕದ ಕಣ್ಣೀರು ತೊಳೆದು ಹೋಗಲಿ
ಸಂತೋಶದ ನಗುವು ಮುಕದಿ ಬೀರಲಿ
ಹೊಸ ವರುಶದ ದಿನಗಳು ಸುಕವಾಗಿರಲಿ
ಎಲ್ಲರಿಗೂ ಒಂದಿಶ್ಟು ಒಳ್ಳೆಯದಾಗಲಿ||

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: