ಮಾಡಿನೋಡಿ ರುಚಿ ರುಚಿಯಾದ ಕೋಳಿ ಹುರುಕಲು

ರೇಶ್ಮಾ ಸುದೀರ್.

chicken_fry

ಕೋಳಿ ಮಾಂಸ —– 1/2 ಕೆ.ಜಿ
ನೀರುಳ್ಳಿ —- 2
ಟೊಮ್ಯಟೊ — 1
ಶುಂಟಿಬೆಳ್ಳುಳ್ಳಿ ಪೇಸ್ಟ್ – 1 ಟಿ ಚಮಚ
ಒಣಗಿಸಿದ ಮೆಂತೆಸೊಪ್ಪು- 1/4 ಟಿ ಚಮಚ
ಗರಂಮಸಾಲ ಪುಡಿ —- 1/4 ಟಿ ಚಮಚ
ಅಚ್ಚಕಾರದಪುಡಿ —— 3 ಟಿ ಚಮಚ
ದನಿಯಪುಡಿ ——– 1/2 ಟಿ ಚಮಚ
ಸೊಯಾಸಾಸ್ —— 1 ಟೇಬಲ್ ಚಮಚ
ಎಣ್ಣೆ ————- 2 ಟೇಬಲ್ ಚಮಚ
ಮೊಸರು ———- 1 ಟಿ ಚಮಚ

ಮಾಡುವ ಬಗೆ:
ಒಂದು ಕುಕ್ಕರ್ ಗೆ 1 ಟೇಬಲ್ ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಹೆಚ್ಚಿದ 1 ನೀರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿದು ಶುಚಿಮಾಡಿದ ಕೋಳಿಯನ್ನು ಹಾಕಿ. ಉಪ್ಪು, ಅರಿಶಿನ ಹಾಕಿ. ಕೋಳಿ ನೀರುಬಿಡುತ್ತಾ ಬರುವಾಗ 1 ಚಮಚ ಮೊಸರು ಹಾಕಿ, 1 ಚಮಚ ಅಚ್ಚಕಾರದಪುಡಿ ಹಾಕಿ ತಿರುಗಿಸಿ ಮುಚ್ಚಳ ಮುಚ್ಚಿ 1 ವಿಶಲ್ ಬರಿಸಿ.
1 ಟೊಮಟೊ ಹಾಗು ನೀರುಳ್ಳಿಯನ್ನು ಬೇರೆ ಬೇರೆಯಾಗಿ ಮಿಕ್ಸಿ ಮಾಡಿಟ್ಟುಕೊಳ್ಳಿ. ಒಂದು ದಪ್ಪತಳದ ಬಾಣಲೆಗೆ 1 ಟೇಬಲ್ ಚಮಚ ಎಣ್ಣೆಹಾಕಿ, ಎಣ್ಣೆ ಕಾದ ನಂತರ ಒಣಗಿದ ಮೆಂತೆಸೊಪ್ಪು, ರುಬ್ಬಿದ ನೀರುಳ್ಳಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ ನಂತರ ಇದಕ್ಕೆ ಶುಂಟಿಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಇದಕ್ಕೆ ರುಬ್ಬಿದ ಟೊಮ್ಯಾಟೊ ಹಾಕಿ ಎಣ್ಣೆ ಮೇಲೆ ಬರುವವರೆಗೆ ಚೆನ್ನಾಗಿ ಬಾಡಿಸಿ. ಈಗ 2 ಚಮಚ ಅಚ್ಚಕಾರದ ಪುಡಿ, ದನಿಯಪುಡಿ ಹಾಗು ಗರಂಮಸಾಲಪುಡಿ ಹಾಕಿ ಹುರಿಯಿರಿ. ಈ ಮಿಶ್ರಣಕ್ಕೆ ಸೊಯಾಸಾಸ್ ಹಾಕಿ ತಿರುಗಿಸಿ. ಬೇಯಿಸಿದ ಕೋಳಿಹಾಕಿ ಸಣ್ಣ ಉರಿಯಲ್ಲಿ ನೀರು ಆರುವವರೆಗೆ ಬಿಡಿ. ಕೋಳಿ ಹುರುಕಲು(fry) ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: