ನೀನೊಂದು ಕವಿತೆ

ಅಮುಬಾವಜೀವಿ.

Knowledge

ನೀನೊಂದು ಕವಿತೆ
ಓದುತ ನಾ ಮೈಯ ಮರೆತೆ

ಪದಗಳ ಏರಿಳಿತವೇ
ನಿನ್ನ ಯೌವನದ ವೈಯಾರ
ಪ್ರಾಸದ ಸಹವಾಸವೇ
ನಿನ್ನ ತನುವ ಶ್ರುಂಗಾರ

ಕವಿಯ ಬಾವವೇ
ನಿನ್ನೊಡಲ ಜೀವವು
ಸವಿಯೋ ಕಬ್ಬಿಗನಿಗೆ
ಮುದವೀಯೋ ಸೌಂದರ‍್ಯವು

ಒಂದೊಂದು ಅಲಂಕಾರವೂ
ನಿನ್ನೀ ಅಂಗಸೌಶ್ಟವವು
ಲಗು ಗುರು ಸಂಗಮವೇ
ಸ್ವರ‍್ಣದೊಡವೆಗಳ ಸಿಂಗಾರವು

ಒಂದೊಂದು ಅಕ್ಶರಕೂ
ನಿನ್ನ ನಗು ಸ್ಪೂರ‍್ತಿಯು
ಸೆಳೆವ ನಿನ್ನೀ ವದನವೇ
ಮದನನ ಪ್ರೇಮ ಸದನವು

 ( ಚಿತ್ರ ಸೆಲೆ: OKGW )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: