ಕಳಿಲೆ ಪಲಾವ್ ಮಾಡುವ ಬಗೆ

ರೇಶ್ಮಾ ಸುದೀರ್.

IMG-20160704-WA0004

ಬೇಕಾಗುವ ಸಾಮಾಗ್ರಿಗಳು:

ಹೆಚ್ಚಿದ ಕಳಿಲೆ ——- 1/4 ಕೆಜಿ (2 ಇಂಚು ಉದ್ದಕ್ಕೆ ಹೆಚ್ಚಿರಿ)
ಸೋನಮಸೂರಿ ಅಕ್ಕಿ — 1/2 ಕೆಜಿ
ಈರುಳ್ಳಿ ———– 2
ಟೊಮಟೊ ———2
ಶುಂಟಿ-ಬೆಳ್ಳುಳ್ಳಿ ಪೇಸ್ಟ್ — 1/2 ಟಿಚಮಚ
ಗಟ್ಟಿಮೊಸರು ——– 1 ಟೆಬಲ್ ಚಮಚ
ನಿಂಬೆರಸ ———- 1 ಟಿಚಮಚ
ಎಣ್ಣೆ ————– 2 ಟೆಬಲ್ ಚಮಚ
ತುಪ್ಪ ————– 1 ಟೆಬಲ್ ಚಮಚ
ಅಚ್ಚಕಾರದಪುಡಿ ——- 2 ಟಿಚಮಚ
ದನಿಯಪುಡಿ ———- 1/2 ಟಿಚಮಚ
ಚಕ್ಕೆ ————– 3 ಇಂಚು
ಲವಂಗ ————- 4
ಏಲಕ್ಕಿ ————- 2
ಚಕ್ರಮೊಗ್ಗು ———- 1
ಪುಲಾವ್ ಎಲೆ ——– 1

ಮಾಡುವ ವಿದಾನ:

ಮೂರು ದಿನ ಕಳಿಲೆಯನ್ನು ನೀರಿನಲ್ಲಿ ನೆನೆಸಿಟ್ಟು ಪ್ರತಿದಿನ ನೀರು ಬದಲಾಯಿಸಿ, ಮೂರನೆದಿನ ನೀರನ್ನು ಸಂಪೂರ‍್ಣ ಹಿಂಡಿ ತೆಗೆದಿರಿಸಿ. ಒಂದು ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪವನ್ನು ಹಾಕಿ, ಎಣ್ಣೆ ಕಾದ ಮೇಲೆ ಪುಲಾವ್ ಎಲೆಯನ್ನು ಹಾಕಿ, ಚಕ್ಕೆ, ಲವಂಗ, ಏಲಕ್ಕಿ, ಚಕ್ರಮೊಗ್ಗನ್ನು ಹಾಕಿ. ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿದು ಟೊಮಟೊವನ್ನು ಹಾಕಿ, ಶುಂಟಿ-ಬೆಳ್ಳುಳ್ಳಿಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಿ. ಈಗ ಕಳಿಲೆಯನ್ನು ಹಾಕಿ ಚೆನ್ನಾಗಿ ಬಾಡಿಸಿ. ಉಪ್ಪು, ಅಚ್ಚಕಾರದಪುಡಿ, ದನಿಯಪುಡಿ ಹಾಕಿ ಚೆನ್ನಾಗಿ ಹುರಿಯಿರಿ ಮೊಸರನ್ನು ಹಾಕಿ ತಿರುಗಿಸಿ. ಅಕ್ಕಿಯನ್ನು ಅಳೆದುಕೊಂಡು (ಉದಾ: 2 ಲೋಟ ಅಕ್ಕಿ ಇದ್ದರೆ 4 ಲೋಟ ನೀರು ಹಾಕಿ) ತೊಳೆದ ನಂತರ ಕುಕ್ಕರ್ ಗೆ ಹಾಕಿ ಎಲ್ಲಾ ಮಿಶ್ರಣದೊಂದಿಗೆ 1 ನಿಮಿಶ ಹುರಿದು, ಅಳೆದು ಇಟ್ಟ ನೀರನ್ನು (ಮೊದಲೆ ಬಿಸಿ ಮಾಡಿರಿ) ಹಾಕಿ, ನಿಂಬೆರಸ ಹಾಕಿ ರುಚಿನೋಡಿ. ಉಪ್ಪು ಮತ್ತು ಹುಳಿ ಬೇಕೆನಿಸಿದರೆ ಸೇರಿಸಿ. ನೀರು ಇಂಗುತ್ತಾ ಬರುವಾಗ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಉರಿಯನ್ನು ಸಣ್ಣ ಮಾಡಿ 10 ನಿಮಿಶ ಒಲೆಯ ಮೇಲೆ ಬಿಡಿ. ಬಿಸಿಬಿಸಿ ಕಳಿಲೆ ಪಲಾವ್ ತಯಾರಾಯಿತು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks