ದಿಡೀರ್ ಕೋಳಿ ಹುರುಕಲು ಮಾಡುವ ಬಗೆ

– ಪ್ರತಿಬಾ ಶ್ರೀನಿವಾಸ್.

IMG-20160803-WA0020

ತುಂಬಾ ಕಡಿಮೆ ಹೊತ್ತಿನಲ್ಲಿ, ದಿಡೀರ್ ಅಂತ ರುಚಿ ರುಚಿಯಾದ ಕೋಳಿ ಹುರುಕಲನ್ನು ಮಾಡಬೇಕೇ? ಇಲ್ಲಿದೆ ನೋಡಿ ಅದನ್ನು ಮಾಡುವ ಬಗೆ.

ಬೇಕಾಗುವ ಸಾಮಾಗ್ರಿಗಳು:

ಕೋಳಿ – 1/2 ಕಿಲೋ
ಈರುಳ್ಳಿ- 2
ಟೊಮೊಟೊ(ಚಿಕ್ಕದು) – 2
ಕೊತ್ತಂಬರಿ ಸೊಪ್ಪು – 1/2 ಕಟ್ಟು
ಬೆಳ್ಳುಳ್ಳಿ – 15 ರಿಂದ 20 ಎಸಳು
ಕಾಳುಮೆಣಸು- ೪ ರಿಂದ 5 ಟಿ ಚಮಚದಷ್ಟು
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ಬಗೆ:

ಮೊದಲಿಗೆ ಕಾಳುಮೆಣಸನ್ನು ಬಾಣಲೆಗೆ ಹಾಕಿ ಹುರಿಯಬೇಕು. ನಂತರ ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹುರಿದ ಕಾಳುಮೆಣಸನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಬೇಕು. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ ಹಾಕಿ ಹುರಿಯಿರಿ. ಬಳಿಕ ಟೊಮೊಟೊ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಇದಕ್ಕೆ ಶುಚಿಯಾಗಿ ತೊಳೆದಿಟ್ಟ ಕೋಳಿ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬೆಂದ ನಂತರ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಹುರಿದರೆ ದಿಡೀರ್ ಕೋಳಿ ಹುರುಕಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: