ಕನವರಿಕೆ

– ಸುರಬಿ ಲತಾ.

ontitana

ಕಣ್ಣಲ್ಲಿ ಬಚ್ಚಿಡಲೇ ನಿನ್ನ
ಉಸಿರಲ್ಲಿ ಉಸಿರಾಗಿಸು ನನ್ನ
ಕಳೆದು ಹೋಗದಿರು ದೂರ
ತೊಡಿಸಲೇ ಮುತ್ತಿನ ಹಾರ

ಹಗಲೆನ್ನದೆ ಇರುಳೆನ್ನದೇ
ಒಂದಾಗುವ ನಾವು
ನೀ ಜೊತೆಗಿರಲು
ನನಗಿಲ್ಲ ನೋವು

ಕಣ್ಣೀರು ಪನ್ನೀರಾಗಲಿ
ಅಗಲಿಕೆಯು ಮರೆಯಾಗಲಿ
ನಿನ್ನೊಲವು ಜೊತೆಯಾಗಲಿ
ಹೊಸ ಕನಸು ಮೂಡುತಿರಲಿ

( ಚಿತ್ರ ಸೆಲೆ:  jesicastephanie.wordpress.com )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: