ಒಲವು ಮೂಡಿದಾಗ

ಕಿರಣ್ ಮಲೆನಾಡು.

customized-3d-photo-wallpaper-for-walls-3-d-wall-murals-natural-landscape-font-b-forest-b

ಒಲವು ಮೂಡಿದಾಗ ಕಂಗಳಲಿ ನೀ ಮೂಡುತಿರುವೆ
ನೀ ನೀಲಿ ಬಾನಲ್ಲಿ ಅತ್ತಿಂದಿತ್ತ ಓಡುವೆಯೇಕೆ
ನಿನ್ನ ಅರಸುತಿರುವೆನು  ಓ ಒಲವೇ

ಒಲವಿನ ಹೊಸ ಕನಸೊಂದು ಚಿಗುರುತ್ತಿದೆ
ನೀ ಕಡಲಾಳದಲ್ಲಿ ಅವಿತಿರುವೆಯೇಕೆ
ನಿನ್ನ ನೋಡ ಬರುತಿಹೆನು ಓ ಒಲವೇ

ಒಲವಿನ ಬೆಳಕಿನ ಅಲೆಯೊಂದು ಹೊಮ್ಮುತ್ತಿದೆ
ನೀ ಬಣ್ಣದ ಚಿಟ್ಟೆಯಂತೆ ಹಾರುವೆಯೇಕೆ
ನಿನ್ನ ಹಿಡಿಯಲು ಸೋತಿಹೆನು  ಓ ಒಲವೇ

ಒಲವಿನ ಹನಿಯೊಂದು ಹಸಿರೆಲೆಯಲ್ಲಿ ತೊಟ್ಟಿಕ್ಕುತ್ತಿದೆ
ನೀ ಮುಂಜಾನೆಯ ಮಂಜಂತೆ ಕರಗುತ್ತಿರುವೆಯೇಕೆ
ನಿನ್ನ ಕಾತರದಿಂದ ಕಾಯುತಿಹೆನು  ಓ ಒಲವೇ

ಒಲವಿನ ಮಾತೊಂದು ಮೆಲ್ಲನೆ ಕೇಳುತಿದೆ
ನೀ ಚೆಲುವಿನ ಚಿಗರೆಯಂತೆ ಜಿಗಿಯುವೆಯೇಕೆ
ನಿನ್ನ ಪಿಸುಮಾತನು ಕೇಳ ಬಯಸಿಹೆನು  ಓ ಒಲವೇ

ಒಲವಿನ ಹಕ್ಕಿಯೊಂದು ಚೆಲುವಿನಿಂದ ನಲಿಯುತ್ತಿದೆ
ನೀ ಈ ಕಂಗಳಿಂದ ಕಣ್ಮರೆಯಾಗುವೆಯೇಕೆ
ನಿನ್ನ ನಾ ಉಸಿರಲಿ ತುಂಬಿಕೊಂಡಿರುವೆನು  ಓ ಒಲವೇ

 

(ಚಿತ್ರ ಸೆಲೆ: aliexpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: