ಮೀಡಿಯಟ್

 ಪ್ರವೀಣ್  ದೇಶಪಾಂಡೆ.

media
ಕ್ಯಾಮರಾ ಕರಕರ
ಸುದ್ದಿ ಬರಬರ

ಸುದ್ದಿಗೆ ಗುದ್ದು
ಬೀರಿನ ಲೋಟ
ಬೇಕಾದ್ದ್ ಹೇಳ್ತಾರ
ಕೊಟ್ಟರೆ ನೋಟ

ಹದ್ದಿನ ರೆಕ್ಕಿಲೆ
ಮಿಸೈಲು ಹಾರಿಸಿ
ಕಾಗಿ ಕೈಯಾಗ
ಕಾಪಿ ತರಿಸಿ

ಸತ್ಯವು ಸಾಯದು
ಸುಳ್ಳ ಗೆದ್ದಿ
ಬಡವ ಸತ್ತಿದ್ದಲ್ಲ
ಶ್ರೀಮಂತ ಸೀನಿದ್ದ ಸುದ್ದಿ

ಕೋಳಿ ಜಗಳ
ಕೋರ‍್ಟಿಗೆ ಹೋತು
ನಾಯಿ ಕೂಗು
ನಾಡಿಗೆ ಕೇಳ್ತು

ಅಂಜಲಿ ಬಂದಳು
ಆದಿತ್ಯವಾರ
ಶಾಲಿನಿ ಹೋದಳು
ಶುಕ್ರವಾರ

ಸಿಕ್ಕಂಗ ನೋಡಿ
ಜಾಹೀರಾತು
ಮಾರಿರಿ ಮನ್ಯಾಗಿನ
ಜವಾಹಿರಾತು

ಮನಶ್ಯಾನ ಕಣ್ಣಿಗೆ
ಕಾಣದ ಮಂಕು
ಬುದ್ದಿಗೆ ನೇರ
ಕ್ಯಾಮರಾ ಲಿಂಕು

ಸುಳ್ಳೊ ಕರೆಯೋ
ಯೋಚಿಸ ಬ್ಯಾಡ್ರಿ
ತೋಚಿದ್ ಅಲ್ಲ
ತೋರ‍್ಸಿದ್ ನೋಡ್ರಿ

ಟೀವಿ ಮುಂದ
ಕುಂತೇತಿ ಮಂದಿ
ಸದ್ಯಕ್ಕ ಆದ
ವಿದೇಹ ಸಮಾದಿ

ಒಂದೇ ಹೆಣಕ್ಕ
ನೂರಾ ಎಂಟ ತಮಟೆ
ಮಲಗುವ ಮುಂಚೆ
ಹೀಗೂ….ಉಂಟೆ?

(ಚಿತ್ರಸೆಲೆ: indianexpress.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ashwini mn says:

    wow super

    2016-12-06 7:00 GMT+05:30 ಹೊನಲು :

    > ನಲ್ಬರಹ posted: “- ಪ್ರವೀಣ್ ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ
    > ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ
    > ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು ಸುಳ್ಳ ಗೆದ್ದಿ ಬಡವ ಸತ್ತಿದ್ದಲ್ಲ ಶ್ರೀಮಂತ
    > ಸೀನಿದ್ದ ಸುದ್ದಿ ಕೋಳಿ ಜಗಳ ”
    >

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *