ಮನಸಿನಲಿ ವೀಣೆ ನುಡಿಸಿದ

– ಸಿಂದು ಬಾರ‍್ಗವ್.

 

ಮನಸಿನಲಿ ನನ್ನ ಮನಸಿನಲಿ
ತಿಳಿಸದೇನೆ ನುಸುಳಿಬಿಟ್ಟ
ಮನಸಿನಲಿ ಈ ಮನಸಿನಲಿ
ಪ್ರೀತಿ ವೀಣೆ ನುಡಿಸಿಬಿಟ್ಟ

ನನಗೇನಾಗಿದೆ
ಮನ ಕುಣಿದಾಡಿದೆ
ನನ್ನವನೆಂಬುದೇ ಕೊಂಚ ಸೊಗಸಾಗಿದೆ

ನೀ ದೂರದಲೇ ನನ್ನ
ನೋಡಿದರೇನೇ ಮನ ನಾಚುವುದು
ನೀ ಸನಿಹ ಬಂದರೆ ಸಾಕೀಗ ಮೈ ನಡುಗುವುದು

ನಿನ್ನ ಒಂದು ಮಾತಿಗೆಂದೇ
ನಾ ಕಾಯುತಲಿರುವೆ
ನಿನ್ನ ಒಂದು ಸ್ಪರ‍್ಶಕ್ಕೆಂದೇ
ಹಾತೊರೆಯುತಲಿರುವೆ

ನಿನ್ನ ಒಂದು ನಗುವು
ಮಗುವಿನಂತ ಮೊಗವು
ಕಾಡುವುದು ಪ್ರತಿಕ್ಶಣವು

ನಿನ್ನ ಹುಸಿಕೋಪ
ನಿನ್ನ ಗಡಸು ದನಿಯೂ
ಗುಯ್ ಗುಡುವುದು ದಿನವೂ

(ಚಿತ್ರ ಸೆಲೆ: ustaellerden.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: