ಬಂತು ಬಂತದೋ ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ.

sankranthi
ಬಂತು ಬಂತದೋ ಸಂಕ್ರಾಂತಿ
ಶ್ರಮದ ಬಾಳಿನ ನಿಜಸಂತಿ |

ಸೊಗದ ನುಡಿಯಲಿ ನಗೆಯ ಅರಳಿಸಿ
ಹೂವು ಹಾಸನು ಹಾಸಿತು |
ಸೂಸು ಗಾಳಿಗೆ ಬೆರೆತು ಪರಿಮಳ
ನೋವು ಅಲಸಿಕೆ ಕಳೆಯಿತು |

ಎಳ್ಳು ಬೆಲ್ಲದ ರುಚಿಯ ಮೋಡಿಯು
ಜನರ ಮನವನು ಸೆಳೆಯಿತು |
ತೆಂಗು ಕಬ್ಬಿನ ಬಾಳೆ ಗರಿಗಳ
ಸ್ವರ‍್ಗ ಲೋಕವೆ ಮೊಳೆಯಿತು |

ಹಾಲು ಹೈನದ ಮದುರ ಜೇನಿನ
ಹೊನಲು ದರೆಯಲಿ ಹರಿಯಿತು |
ವರುಶವೊಂದರ ಹರುಶವೆಲ್ಲವು
ಪರುಶ ಬಾವದಿ ಬೆರೆಯಿತು |

ಚಳಿಯ ಒಲುಮೆಗೆ ಜೀವ ಜೀವದ
ಪುಳಕ ಕಚಗುಳಿ ಹೆಚ್ಚಿತು |
ಬೆಳೆದ ಪೈರಿನ ಚುಳುಕು ಹಾಲ್ಸವಿ
ಲೋಕ ಲೋಕಕೆ ಮೆಚ್ಚಿತು |

(ಚಿತ್ರ ಸೆಲೆ: vijayakarnataka)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: