ಸೀತೆ – ಬೂಮಿಕಾ ಮಾಯಿ

– ಸುರಬಿ ಲತಾ.

seethe

ಅರಮನೆಯಲ್ಲಿ ಅರಗಿಣಿಯಂತೆ
ಬೆಳೆದಿದ್ದ ಮಾತೆ
ಕಾನನದಲ್ಲಿ ಕಗ್ಗತ್ತಲ ನಡುವೆ
ಕಾಲ ಕಳೆದಳಾ ಸೀತೆ

ಹೆಜ್ಜೆ ಹೆಜ್ಜೆಗೂ ಹೂಗಳ ಮೇಲೆ
ಅಡಿಯ ಇರಿಸಿದ ಬಾಲೆ
ಕಾಲಲಿ ಸುರಿವ ನೆತ್ತರಿನಲ್ಲೇ
ನಡೆದಳಾ ಸುಕೋಮಲೆ

ರಾಮನ ಪಾದದಡಿಯಲ್ಲಿ
ಪಾವನಳಾದ ಶಾಂತಲೆ
ರಾವಣ ಕೈಗೆ ಸಿಕ್ಕು
ನೊಂದಳಾ ಮಂಗಳೆ

ಹಗಲಿರುಳು ರಾಮನ ಜಪದಲ್ಲಿ
ದಿನ ಕಳೆದಳು
ರಾಮನ ಮಾತಿನಂತೆ
ಅಗ್ನಿಯಲ್ಲಿ ಮಿಂದು ಎದ್ದಳು

ತಾಳ್ಮೆಗೆ ಮಾದರಿಯಾದಳು
ಮಹಾ ತಾಯಿ
ಬೂದೇವಿಯನ್ನು ಅಪ್ಪಿದಳು
ಬೂಮಿಕಾ ಮಾಯಿ

(ಚಿತ್ರ ಸೆಲೆ: godsownweb.blogspot.in )

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.