ತಬ್ಬಲಿಯ ಬೇಡಿಕೆ
– ಶಶಿ.ಎಸ್.ಬಟ್.
(ಬರಹಗಾರರ ಮಾತು : ಈ ಕವನದಲ್ಲಿ ಒಂದು ದಿಕ್ಕಿಲ್ಲದ, ತಬ್ಬಲಿ ಮಗುವಿನ ಬಾವನೆಯನ್ನು ವ್ಯಕ್ತಪಡಿಸಲಾಗಿದೆ)
ನವಮಾಸ ಹೊತ್ತೆ ಬೆಚ್ಚನೆಯ ಗೂಡಲ್ಲಿ
ಮತ್ತೆ ತಳ್ಳಿದೆಯೇಕೆ ಈ ಗುಡಿಯಾ ಬಾಗಿಲಲಿ?
ಮೇಲಿರುವನೊಬ್ಬ ಕಾಯುವನು ಎಂದು
ನಿಮ್ಮ ತಪ್ಪಿಗೆ ಬಲಿಯಾದೆ ನಾನಿಂದು
ನೀನೇನು ದೇವಕಿಯಲ್ಲ ಸೆರೆಮನೆಯಲೂ ಇಲ್ಲ
ಯಾವ ಯಶೋದೆಯೂ ನಮ್ಮನ್ನು ಸಾಕುವುದಿಲ್ಲ
ಅಮ್ಮ ಎಂಬ ಎರಡಕ್ಶರಕೆ ಅರ‍್ತವೇನು ಹೇಳು
ನನಗಂತು ಗೊತ್ತಿಲ್ಲ ನಿನಗೆ ತಿಳಿಯುದೇನು
ಬಿಸಿಲಲ್ಲಿ ಬಾಡುವುದಿಲ್ಲ ಮಳೆಯಲ್ಲಿ ನೆನೆಯುವುದಿಲ್ಲ
ಚಳಿಯಲ್ಲಿ ನಡುಗುವುದಿಲ್ಲ ಬೀದಿಗೆ ಬಿದ್ದ ಮೇಲೆ
ನೋವು ನಲಿವುಗಳಿಲ್ಲ ಹಸಿವು ನೀರಡಿಕೆಯಿಲ್ಲ
ಮೇಲಿರುವವನ ಆಟವಲ್ಲ ನಿಮ್ಮಗಳ ಲೀಲೆ
ನೀ ಕುಂತಿಯಾಗಿ ಬಾಳು ಸಾಗಿಸಬಹುದು
ನಾ ಕರ‍್ಣನಾದರೂ ನಿನಗೆ ಕನಿಕರ ಬಾರದು
ಹಿಂತಿರುಗಿ ಬಂದೊಮ್ಮೆ ನೋಡು ನಮ್ಮ ಪರಿಸ್ತಿತಿಯ
ಆಗಲಾದರೂ ನಿನಗೆ ತಪ್ಪಿನ ಅರಿವಾಗಬಹುದು
( ಚಿತ್ರ ಸೆಲೆ: reencuentrodealmas.blogspot.in )
ಈ ಕವಿತೆ ತಬ್ಬಲಿ ಮಕ್ಕಳ ಭಾವನೆಗಳನ್ನು ಪ್ರತಿಬಿಂಬಿಸುತ್ತಾ, ಮನ ಕಲಕುವಂತಿದೆ.
ಬಹಳ ಚೆನ್ನಾಗಿ ಮೂಡಿಬಂದಿದೆ.
CHENNAGIDE