ಇಂದೇಕೋ ..

– ಸುರಬಿ ಲತಾ.

loneliness-4

ಮೌನ ತಬ್ಬಿತು
ಮಾತು ನಿಂತಿತು
ಕದಡಿದ ಕೊಳವಾಯಿತು ಮನ
ಇಂದೇಕೋ

ಮೋಡ ಮುಸುಕಿದ ಬಾನು
ಮಳೆ ಕಾಣದ ಇಳೆ
ಬತ್ತಿದಂತಾಯಿತು ಕನಸು
ಇಂದೇಕೋ

ಬಯಸಿದೆ ಒಂಟಿತನ
ಬೇಕಿಲ್ಲ ಗೆಳೆತನ
ಸಾಕಾಯಿತು ಜೀವನ
ಇಂದೇಕೋ

ಪ್ರಕ್ರುತಿಯ ಮಡಿಲಲ್ಲಿ
ಮನುಜರೇ ಕಾಣದ ಹಾದಿಯಲ್ಲಿ
ದಿಗಂತದೆಡೆಗೆ ನಡೆದು ಬಿಡುವಾಸೆ
ಇಂದೇಕೋ

ದೂರದ ಗುಡ್ಡದ ಮೇಲೆ
ಮಂಡಿಯೂರಿ ಶೂನ್ಯದೆಡೆಗೆ
ನೋಟವ ಹರಿಸುವಾಸೆ
ಇಂದೇಕೋ

ಬಂದನಗಳ ಬೇಲಿಯ ಕಳಚಿ
ಬಾಳಿನ ತುತ್ತ ತುದಿಯ ಕಾಣುವಾಸೆ
ಹಸಿರ ನಡುವಲ್ಲಿ ಕೊನೆಯುಸಿರು ಬಿಡುವಾಸೆ
ಇಂದೇಕೋ

( ಚಿತ್ರ ಸೆಲೆ: ninjamarketing.it )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications