ಕವಿತೆ: ಪ್ರಕ್ರುತಿ

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ).

dsc_0055

ಮುಂಜಾನೆಯ ಮುಸುಕಿನಂತೆ
ಬೆಳಕ ಹೊರಸೂಸುವವನು

ಎಲೆಯ ಇಬ್ಬನಿಯಂತೆ
ಮುಟ್ಟಿದಾಗಲೇ ಜಾರುವವನು

ಹೂವಿನಲ್ಲಿರೋ ಮಕರಂದದಂತೆ
ಸವಿಯ ಹಂಚುವವನು

ಜೇನಿನಲ್ಲಿರೋ ಜೇನಿನ ಹನಿಯಂತೆ
ಅಪರೂಪದ ಸಿಹಿಯಿವನು

ನೀರಿನಲ್ಲಿರೋ ಹೆಜ್ಜೆಯಂತೆ
ಮುಗ್ದ ಮನಸಿನ ಮುಕದವನು

ಉರಿವ ರವಿಯಂತೆ
ಪ್ರೀತಿಯನು ರಮಿಸುವವನು

ಹರಿದಾಡುವ ನೀರಿನಂತೆ
ಕಲ್ಮಶವ ತೊಳೆವವನು
ಈ ನನ್ನ ನಲ್ಲನು, ಇವನೇ ನನಗೆ ಆಪ್ತನು.

(ಚಿತ್ರಸೆಲೆ: ರತೀಶ ರತ್ನಾಕರ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: