ಪಾಲಕ್ ಪನೀರ್ ಮಸಾಲೆಯನ್ನು ಮಾಡುವ ಬಗೆ
ಬೇಕಾಗುವ ಸಾಮಾಗ್ರಿಗಳು:
ಪಾಲಕ್ ಸೊಪ್ಪು -2 ಕಟ್ಟು
ಪನೀರ್ – 100 ಗ್ರಾಂ
ಹಸಿಮೆಣಸು – 6-8
ಟೊಮೊಟೊ – 2 ( ಚಿಕ್ಕ ಗಾತ್ರದ್ದು)
ಈರುಳ್ಳಿ – 2
ಗರಂ ಮಸಾಲೆ – 1 ಚಮಚ
ಗಸಗಸೆ – 2-3 ಚಮಚ
ಗೋಡಂಬಿ- 8-10
ಶುಂಟಿ ಬೆಳ್ಳುಳ್ಳಿ ಗೊಜ್ಜು – 1 ಚಮಚ
ಮಾಡುವ ಬಗೆ:
ಮೊದಲಿಗೆ ಶುಚಿಗೊಳಿಸಿದ ಪಾಲಕ್ ಸೊಪ್ಪು ಹಾಗೂ ಹಸಿಮೆಣಸನ್ನು 2-3 ನಿಮಿಶದಶ್ಟು ನೀರಿನಲ್ಲಿ ಬೇಯಿಸಿ ರುಬ್ಬಿಟ್ಟುಕೊಳ್ಳಿ. ಗೋಡಂಬಿ ಮತ್ತು ಗಸಗಸೆಯ ಪೇಸ್ಟ್ ತಯಾರಿಸಿಕೊಳ್ಳಿ. ಪನೀರನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದನಂತರ ಈರುಳ್ಳಿ, ಶುಂಟಿ ಬೆಳ್ಳುಳ್ಳಿ ಗೊಜ್ಜು ಹಾಕಿ ಬಾಡಿಸಿಕೊಳ್ಳಿ, ನಂತರ ಇದಕ್ಕೆ ಟೊಮೊಟೊ, ಗರಂಮಸಾಲೆ ಹಾಕಿ, ರುಬ್ಬಿದ 2 ಮಿಶ್ರಣ ಹಾಕಿ, ಸ್ವಲ್ಪ ನೀರು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕುದಿಯಲು ಶುರುವಾದಾಗ, ಪನೀರ್ ತುಂಡುಗಳನ್ನು ಹಾಕಿ ಕುದಿಸಿದರೆ ಪಾಲಕ್ ಪನೀರ್ ಮಸಾಲೆ ಸಿದ್ದ. ಇದನ್ನು ಪೂರಿ, ಚಪಾತಿಯ ಜೊತೆ ಸವಿಯಲು ಚೆನ್ನಾಗಿರುತ್ತದೆ.
(ಚಿತ್ರ ಸೆಲೆ: vegrecipesofindia.com)
ಇತ್ತೀಚಿನ ಅನಿಸಿಕೆಗಳು