ಬಾಳಕ – ಮೊಸರನ್ನದ ಜೊತೆಗೆ ಸವಿಯುವ ಮಜ್ಜಿಗೆ ಮೆಣಸು!

ಕಲ್ಪನಾ ಹೆಗಡೆ.

balak-ph-2

ಬಾಳಕ ಮೊಸರನ್ನದೊಂದಿಗೆ ನಂಜಿಕೊಳ್ಳಲು ತುಂಬಾ ಚೆನ್ನಾಗಿರತ್ತೆ. ಬಾಳಕ ತಯಾರಿಸೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಿದ್ದಲ್ಲಿ ಇಲ್ಲಿದೆ ಅದರ ವಿವರ.

ಬೇಕಾಗುವ ಸಾಮಗ್ರಿಗಳು:
1. 1/2 ಕೆ.ಜಿ. ಹಸಿಮೆಣಸಿನಕಾಯಿ
2. ಮಜ್ಜಿಗೆ
3. ಉಪ್ಪು
4. ಇಂಗು
5. ಮೆಂತ್ಯದ ಪುಡಿ

ಮಾಡುವ ಬಗೆ:
ಮೊದಲು ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಮದ್ಯಬಾಗದಲ್ಲಿ ಸೀಳಿಕೊಳ್ಳಿ. ಆನಂತರ ಮಜ್ಜಿಗೆಗೆ ಉಪ್ಪು, ಇಂಗು, 1 ಚಮಚ ಮೆಂತ್ಯಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಸೀಳಿದ ಮೆಣಸಿನಕಾಯಿಯನ್ನು ಮಜ್ಜಿಗೆಯಲ್ಲಿ ಹಾಕಿ 8 ತಾಸುಗಳ ಕಾಲ (ರಾತ್ರಿ) ನೆನಸಿಕೊಳ್ಳಿ. ಆನಂತರ ಮಜ್ಜಿಗೆಯಲ್ಲಿ ನೆಂದ ಮೆಣಸಿನಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿಕೊಳ್ಳಿ. ಒಣಗಿದ ನಂತರ ಡಬ್ಬದಲ್ಲಿ ತುಂಬಿಟ್ಟುಕೊಳ್ಳಿ. ನಿಮಗೆ ಬೇಕಾದಾಗ ಎಣ್ಣೆಯಲ್ಲಿ ಕರಿದು ಊಟದ ಸಮಯದಲ್ಲಿ ಮೊಸರನ್ನದೊಂದಿಗೆ ಅತವಾ ಮಜ್ಜಿಗೆ ಅನ್ನಕ್ಕೆ ಅತವಾ ಮಜ್ಜಿಗೆ ಹುಳಿಯ ಜೊತೆಯಲ್ಲಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: