ದೂರ ಹೋದಶ್ಟು ಕಾಡಿದೆ…

– ಸುರಬಿ ಲತಾ.

 

ದೂರ ಹೋದಶ್ಟು ಕಾಡಿದೆ
ಅವನ ನೆನಪು
ನೆನೆದೊಡನೆ ಏಕೋ
ಕಣ್ಣಲ್ಲಿ ಹೊಳಪು

ಮನ ಚೂರಾದರು ಎಲ್ಲದರಲ್ಲೂ
ಕಂಡೆ ಅವನದೇ ಮುಕ
ಮಾಯವಾಯಿತೇ ಇದರಿಂದ
ಬಾಳಿನ ಸುಕ

ಕಣ್ಣಂಚಿನ ಹನಿ ತೋರಗೊಡದ
ಸ್ವಾಬಿಮಾನ
ಬಿಡದಾದೆ ನನ್ನ ಈ
ಬಿಗುಮಾನ

ಸಾಕು ಪ್ರೇಮದ ಆಟ
ಆದರೇಕೀ ತೊಳಲಾಟ
ಮರೆವು ತಬ್ಬಬಾರದೇ ನನ್ನನ್ನು
ಮರೆಸಿ ಬಿಡಬಾರದೇ ಅವನನ್ನು

( ಚಿತ್ರ ಸೆಲೆ:  abstract.desktopnexus.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *