ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ

– ರಂಜಿತ.

ನಿತ್ಯ ನೂತನ ಈ ಚಿಂತನೆಗಳು
ಸದಾ ನನ್ನೊಟಿಗೆ ಪಯಣಿಸುವವು

ದೂರದೂರಿನವರೆಗೂ ಹೊಸ ಕತೆಗಳನ್ನು ಹೇಳುತ್ತಾ
ಉತ್ತೇಜಿಸುವವು ಒಮ್ಮೊಮ್ಮೆ
ಕುಗ್ಗಿಸುವವು ಇನ್ನೊಮ್ಮೆ
ಕಾಲೆಳೆಯುವವು ಮಗದೊಮ್ಮೆ

ಹೀಯಾಳಿಸುವವು ಅಪರೂಪಕೊಮ್ಮೆ
ಏನೇ ಮಾಡಿದರೂ ನನ್ನನ್ನು ಬಿಡಲೊಲ್ಲವು
ಹೀಗೇಕೆ…????
ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ

ಅವುಗಳಿಂದ ಕಳಚಿಕೊಳ್ಳುವ ಸಾದನೆ
ಹೌದು.. ಅದೊಂದು ಅಪರೂಪದ ಸಾದನೆಯೇ ಸರಿ ನನ್ನ ಪಾಲಿಗೆ

( ಚಿತ್ರ ಸೆಲೆ: legalnursepodcasts.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: