ಜಾನಕಮ್ಮ

– ಸುರಬಿ ಲತಾ.

ಮದುರ ರಾಗದಿ ಮನವ
ಸೆಳೆದ ಕೋಗಿಲೆ
ನಿನಗೇನೆಂದು ನಾ ಹಾಡಲೇ

ಜಿನುಗುವ ಚಿಲುಮೆ ನೀನು
ನಿನ್ನೊಡನೆ ಬರಲೇನು
ನಿನ್ನ ರಾಗಕೆ ಸ್ವರವಾಗಲೇನು

ನೀ ನಡೆವ ಹಾದಿಯ
ನಮಿಸುತ ನಡೆದೆ
ಎದೆಯೊಳಗೆ ಮನೆಮಾಡಿದೆ

ಮ್ರುದು ನಗೆಯಲಿ ಮುತ್ತು
ನೀನಾದೆ ನಮ್ಮೆಲ್ಲರ ಸೊತ್ತು
ಹೇಳಲು ಪದ ಸಾಲದ ಹೊತ್ತು

ತಬ್ಬಿ ಎನ್ನ ಹರಸು
ನಿನಗೆ ನಾನೊಂದು ಕೂಸು
ನಿನ್ನ ಕಾಣಲು ಕಾದಿದೆ ಮನಸ್ಸು

(ಚಿತ್ರ ಸೆಲೆ: alchetron.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: