ರಾದೆ ರಾದೆ ಮನವನು ತಣಿಸಿದೆ ನೀ…

– ಸಿಂದು ಬಾರ‍್ಗವ್.

ರಾದೆ ರಾದೆ ಮನವನು ತಣಿಸಿದೆ ನೀ
ರಾದೆ ರಾದೆ ಪ್ರೀತಿಯ ಉಣಿಸಿದೆ ನೀ…

ನಿನ್ನಯ ಪ್ರೀತಿಗೆ ಹೂಬನ ಅರಳಿದೆ
ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ
ಕೊಳಲಿನ ನಾದಕೆ ನೀ ಜೊತೆಯಾದೆ
ಕಿರುಬೆರಳನು ಹಿಡಿಯುತ ನೀ ನಡೆದೆ…

ರಾದೆ ರಾದೆ ಮನವನು ತಣಿಸಿದೆ ನೀ…

ಸೋಲಲಿ ನಿಂತು ಸಲಹೆಯ ನೀಡಿದೆ
ನೋವಲಿ ನಿಂತು ಬೆಂಬಲ ನೀಡಿದೆ
ಹೆಂಗಳೆಯರ ಮನ ಗೆದ್ದವ ನಾನು
ನನ್ನೀ ಮನವ ಗೆದ್ದವಳು ನೀನು…

ರಾದೆ ರಾದೆ ಮನವನು ತಣಿಸಿದೆ ನೀ..

ನಮ್ಮಯ ಪ್ರೀತಿಯು ಜನರಿಗೆ ಮಾದರಿ
ನೋವನು ಮರೆಸುವ ಪ್ರೀತಿಯು ಸಿಗಲಿ
ನಮ್ಮಯ ನಡತೆಯು ಲೋಕಕೆ ಮಾದರಿ
ಸ್ವಾರ‍್ತವು ಇಲ್ಲದೆ ಪ್ರೀತಿಯ ಮಾಡಲಿ…

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: