‘ಮಾದಲಿ’ – ಉತ್ತರ ಕರ‍್ನಾಟಕದ ಜಾತ್ರೆಹೊತ್ತಿನ ಸಿಹಿ ಅಡುಗೆ
– ರೂಪಾ ಪಾಟೀಲ್.
‘ಮಾದಲಿ’ – ಉತ್ತರ ಕರ‍್ನಾಟಕದಲ್ಲಿ ಜಾತ್ರೆಗಳ ಹೊತ್ತಿನಲ್ಲಿ ತಪ್ಪದೇ ಮಾಡಲಾಗುವ ಅತೀ ಸರಳವಾದ ಒಂದು ಸಿಹಿ ಅಡುಗೆ.
ಮಾಡಲು ಬೇಕಾಗುವ ಸಾಮಗ್ರಿಗಳು:
1 ಬಟ್ಟಲು ಗೋದಿ ಹಿಟ್ಟು
1 ಬಟ್ಟಲು ಸಣ್ಣ ರವೆ
1 1/2 ಬಟ್ಟಲು ಬೆಲ್ಲ(ಸಣ್ಣಗೆ ಪುಡಿ ಮಾಡಿಕೊಂಡಿರುವುದು)
4 ಏಲಕ್ಕಿ, ಸ್ವಲ್ಪ ಶುಂಟಿಯ ಪುಡಿ
1 ಬಟ್ಟಲು ತುರಿದ ಒಣಕೊಬ್ಬರಿ
ಸ್ವಲ್ಪ ಹುರಿದುಕೊಂಡಿರುವ ಗಸಗಸೆ
ಸ್ವಲ್ಪ ಪುಟಾಣಿ
ಮಾಡುವ ಬಗೆ:
ಗೋದಿಯ ಹಿಟ್ಟು, ರವೆ ಮತ್ತು ಚಿಟಿಕೆ ಉಪ್ಪು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸುವದು. 10 ನಿಮಿಶ ಬಿಟ್ಟು ಈ ಹಿಟ್ಟಿನಿಂದ ಸ್ವಲ್ಪ ದಪ್ಪನೆಯ ಚಪಾತಿ ತಯಾರಿಸಿಕೊಂಡು, ಚೆನ್ನಾಗಿ ಕೆಂಬಣ್ಣ ಬರುವರೆಗೆ ಬೇಯಿಸಿಕೊಳ್ಳುವುದು.
ತಯಾರಿಸಿದ ಚಪಾತಿಗಳನ್ನು ಸಣ್ಣಗೆ ಮುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳುವುದು.
ಈ ಪುಡಿಗೆ ಬೆಲ್ಲ, ಏಲಕ್ಕಿ, ಶುಂಟಿ, ತುರಿದ ಕೊಬ್ಬರಿ, ಪುಟಾಣಿ, ಗಸಗಸೆ ಎಲ್ಲವನ್ನು ಸೇರಿಸಿಕೊಂಡು ಮಿಶ್ರಣ ಮಾಡಿಕೊಂಡರೆ ಮಾದಲಿ ತಯಾರು. ಇದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ತುಂಬಾ ರುಚಿಕರವಾಗಿರುತ್ತದೆ 🙂
ಇತ್ತೀಚಿನ ಅನಿಸಿಕೆಗಳು