ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು…

– ಸುರಬಿ ಲತಾ.

 

ಹರಿವ ತೊರೆಯಲಿ ಇಳಿಬಿಟ್ಟ ಪಾದಗಳು
ಮುತ್ತಿಡಲು ಮರಿಮೀನುಗಳು
ಕಚಗುಳಿ ಇಟ್ಟಂತಾಗಿ ರಂಗು ಪಡೆದಿದೆ
ಪಾದಗಳು

ಮುಗಿಲೆಲ್ಲಾ ಬೆಳ್ಳಿ ಮೋಡಗಳು
ಚಿತ್ರ ವಿಚಿತ್ರ ಚಿತ್ತಾರ ಬಿಡಿಸಿರಲು
ಕಾಣದ ಕೋಗಿಲೆ ದನಿಯ ಕೇಳಿರಲು
ಮುಗಿಲೆಡೆ ಹಾರಬಯಸಿವೆ

ತೇವಗೊಂಡ ನಿನ್ನ ಪಾದಗಳ
ಹೆಜ್ಜೆ ಗುರುತಿನ ಮೇಲೆ
ಹೆಜ್ಜೆ ಇಟ್ಟು ನಡೆಯಬಯಸಿವೆ
ಪಾದಗಳು

ನೀ ಇಟ್ಟೆ ಸಿಹಿ ಹೂ ಮುತ್ತು
ನನ್ನ ಪಾದಗಳಿಗೆ ಅದ ನೆನೆದು
ನಲಿದಿದೆ ಅದರಗಳು
ಮತ್ತೂ ಬೇಕೆಂದು ಬಯಸಿದೆ ಪಾದಗಳು

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: