ನಾ ನಿನ್ನ ನೆರಳಾಗಲಾರೆ ಪ್ರಿಯ!

– ಸುಹಾಸಿನಿ.ಕೆ.

ನಾ ನಿನ್ನ ನೆರಳಾಗಲಾರೆ ಪ್ರಿಯ!

ಸೂರ‍್ಯ ಪ್ರುತ್ವಿಗಳ ಕಣ್ಣಾಮುಚ್ಚಾಲೆಯಾಟದ
ಹಾಲುಗುಂಡಿ ನಾನಾಗಲಾರೆ ಪ್ರಿಯ

ಸೂರ‍್ಯನ ಪ್ರಕರತೆಗೆ ಹೆದರಿ ನಿನ್ನ ಕಾಲ್ಕೆಳಗೆ
ಅವಿತುಕೊಳ್ಳುವ ನೆರಳು ನಾನಾಗಲಾರೆ ಪ್ರಿಯ

ಸ್ವಂತ ಅಸ್ತಿತ್ವವೇ ಇಲ್ಲದ
ನೆರಳು ನಾನಾಗಲಾರೆ ಪ್ರಿಯ

ನಿನ್ನ ಕೈ ಬೆರಳುಗಳಲ್ಲಿ
ನನ್ನ ಕೈ ಬೆರಳುಗಳನ್ನು
ಬಿಗಿಯಾಗಿ ಹೆಣೆದು ಬಾಳ ಪಯಣದುದ್ದಕ್ಕೂ
ಜೊತೆಯಾಗಿ ಹೆಜ್ಜೆ ಹಾಕುವ ಬಾಳ ಸ್ನೇಹಿತೆಯಾಗುವೆ

ಅದು ಹೂವಿನ ಹಾಸಿಗೆಯಾದರೂ ಸರಿಯೆ
ಕಲ್ಲು ಮುಳ್ಳಿನ ಹಾದಿ ಬಂದರೂ ಸರಿಯೆ
ಏನಂತೀಯ ಪ್ರಿಯ?

( ಚಿತ್ರ ಸೆಲೆ: ticotimes.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: