ಬದುಕಿಗೆ ದೇವತೆಯಂತೆ
– ಸವಿತಾ.
ಉಕ್ಕುವ ಪ್ರೀತಿ ಸಾಮೀಪ್ಯಕೆ
ಹಾತೊರೆಯುವಂತೆ
ಒಡನಾಟದಲಿ
ಬಾವಗಳು ಬೆಸೆದಂತೆ
ಬರವಸೆಯಲಿ
ಬೆಳಕೊಂದು ಮೂಡಿದಂತೆ
ಸಂಬಂದದಲಿ
ಬದ್ರತೆ ಅಚಲವಾದಂತೆ
ಮನವ ತಣಿಸುತ
ಜತೆಯಿದ್ದು ಪ್ರೇರಕಶಕ್ತಿಯಂತೆ
ಸತತ ಓಲೈಸುತ
ನಿರಂತರ ಸ್ಪೂರ‍್ತಿವಾಹಿನಿಯಂತೆ
ಈ ಹೆಣ್ಣು
ಬದುಕಿಗೆ ದೇವತೆಯಂತೆ
(ಚಿತ್ರ ಸೆಲೆ: wikimedia.org)
ಸರ್ ನಮಸ್ಕಾರ. ನನ್ನ ಬರಹ ನಿಮ್ಮ ತಾಣಕ್ಕೆ ಕಳಿಸಬಹುದೆ? ತಮ್ಮ email ದಯವಿಟ್ಟು ತಿಳಿಸಿ.
ಕಂಡಿತವಾಗಿ. ಬರಹಗಳನ್ನು ಇಲ್ಲಿಗೆ ಕಳಿಸಿ: [email protected]
ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ನೋಡಿ.
http://128.199.25.99/%E0%B2%AC%E0%B2%B0%E0%B2%B9-%E0%B2%95%E0%B2%B3%E0%B3%81%E0%B2%B9%E0%B2%BF%E0%B2%B8%E0%B2%BF/