ಹಬ್ಬಕ್ಕೆ ಮಾಡಿರಿ ಗಜ್ಜರಿ ಹಲ್ವಾ
– ಸವಿತಾ.
ಬೇಕಾಗುವ ಸಾಮಗ್ರಿಗಳು:
ಎರಡು ಲೋಟ ಹಾಲು
ಎರಡು ಲೋಟ ನೀರು
ನಾಲ್ಕು ಚಮಚ ತುಪ್ಪ
ಎರಡು ಕಪ್ ತುರಿದ ಗಜ್ಜರಿ
ಎರಡು ಲೋಟ ಸಕ್ಕರೆ ಅತವಾ ಬೆಲ್ಲ
ನಾಲ್ಕು ಬಾದಾಮಿ
ನಾಲ್ಕು ಗೋಡಂಬಿ
ನಾಲ್ಕು ಏಲಕ್ಕಿ
ನಾಲ್ಕು ಲವಂಗ
ಮಾಡುವ ಬಗೆ:
ಮೊದಲಿಗೆ ಗಜ್ಜರಿ ಸಿಪ್ಪೆ ತೆಗೆದು ತುರಿದು ಕೊಳ್ಳಿರಿ. ಕುಕ್ಕರಿನಲ್ಲಿ ಹಾಲು ನೀರು ಸೇರಿಸಿ ಕುದಿಸಿ ಬಳಿಕ ತುರಿದಿಟ್ಟ ಗಜ್ಜರಿ ಸೇರಿಸಿ. ಆಮೇಲೆ ತುಪ್ಪ ಸೇರಿಸಿ ಮುಚ್ಚಳ ಹಾಕಿ ಎರಡು ಕೂಗು ಬರುವವರೆಗೆ ಕುದಿಸಿರಿ. ಕುಕ್ಕರ್ ಸ್ವಲ್ಪ ಆರಿದ ನಂತರ ಮುಚ್ಚಳ ತೆಗೆದು ಎರಡು ಲೋಟ ಸಕ್ಕರೆ ಅತವಾ ಬೆಲ್ಲ ಹಾಕಿ ಅದು ಕರಗುವವರೆಗೆ ಕುದಿಸಿರಿ. ಇದು ಕುದಿಯುತ್ತಿದ್ದಂತೆ ಗಟ್ಟಿಯಾಗಿ ಹಲ್ವಾದಂತೆ ಆಗುವುದು. ತಯಾರಾದ ಹಲ್ವಾಗೆ ಅಲಂಕಾರಕ್ಕೆ ಬಾದಾಮಿ, ಗೋಡಂಬಿ ಹಾಕಿರಿ. ಕೊನೆಗೆ ಏಲಕ್ಕಿ ಹಾಗೂ ಲವಂಗವನ್ನು ಪುಡಿಮಾಡಿ ಮೇಲೆ ಉದುರಿಸಿದರೆ ಹಲ್ವಾ ತಯಾರು! ಆರೋಗ್ಯಕರ ರುಚಿಯಾದ ಗಜ್ಜರಿ ಹಲ್ವಾ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು