ಹದಿನಾರು ವರುಶಗಳಾಯ್ತು…

– ಅಜಯ್ ರಾಜ್.

 

ಹದಿನಾರು ವರುಶಗಳಾಯ್ತು
ನನ್ನೆದೆಗವಳು ಕೊಳ್ಳಿಯಿಟ್ಟು
ಈಗಲೂ ದಹಿಸುತಿದೆ ಅಗ್ನಿ ನಿನಾದ
ಅವಳದೇ ನೆನಪಿನ ಆರ‍್ತನಾದ!

ಇನ್ನೂ ನೆನಪಿದೆ
ನನ್ನ ಬದುಕಿನಲಿ ಅವಳು ಬಂದದ್ದು
ಎಳೆ ಎಳೆಯಾಗಿ ಕನಸುಗಳ ಬಿತ್ತಿದ್ದು
ಮದುರ ಸ್ಮ್ರುತಿಯ ಹೆಕ್ಕಿ ತಂದದ್ದು

ಎಂದಿಗೂ ಊಹಿಸಿಕೊಂಡಿರಲಿಲ್ಲ
ಅವಳಿಲ್ಲದ ಜೀವನ
ನಡುರಾತ್ರಿಯ ನೀರವ ಏಕಾಂತದಲೂ
ಅವಳದೇ ದ್ಯಾನ

ಅವಳು ಬಂದದ್ದೇ
ಸ್ತಿತಪ್ರಜ್ನೆ ಮುಸುಕಾಗಿ
ಸುಪ್ತಪ್ರಜ್ನೆಯುದಯಿಸಿದೆ
ಮೇರೆಯಿಲ್ಲದ ಮೆರವಣಿಗೆಯೊಂದು
ಎದೆಯೊಳಗೆ ಮೆಲ್ಲನೆ ಸಾಗುತಿದೆ!

ಅಬ್ಬಾ…ಕಾಲವೆಶ್ಟು ಕ್ಶಣಿಕ!
ಹದಿನಾರು ವರ‍್ಶಗಳಾಯ್ತು
ನನ್ನೆದೆಗವಳು ಕೊಳ್ಳಿಯಿಟ್ಟು!

(ಚಿತ್ರ ಸೆಲೆ: thebestshayaricollection.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: