ಮನದ ಪ್ರತಿದ್ವನಿಯು ಸಿರಿಗನ್ನಡ

– ಈಶ್ವರ ಹಡಪದ.

ಕನ್ನಡ ಕನ್ನಡ ನಮ್ಮ ಕನ್ನಡ
ಮನದ ಪ್ರತಿದ್ವನಿಯು ಈ ಸಿರಿಗನ್ನಡ
ವಿಶ್ವಮಾನವ ಕಲ್ಪನೆಯ ಕೊಟ್ಟ
ನಮ್ಮ ಕರುನಾಡ ಹಬ್ಬ ಈ ರಾಜ್ಯೋತ್ಸವ

ಗುಮ್ಮಟ ವಾಸ್ತು ಶಿಲ್ಪಗಳು
ಕನ್ನಡಾಂಬೆಗೆ ಕಳಶವು
ಜೋಗದಿ ದುಮುಕುವ ನೀರೆಲ್ಲ
ಕನ್ನಡಾಂಬೆಗೆ ಅಬಿಶೇಕವು
ಪಂಪ ರನ್ನರ ಕಲ್ಪನೆಗೆ
ಕನ್ನಡಾಂಬೆ ಜೀವಕೊಟ್ಟವಳು

ಬಾರತಾಂಬೆಯ ಹಣೆಯನ್ನು
ಸಿಂಗರಿಸುವ ಶ್ರೀಗಂದದ ತವರೂರು
ಹಂಪಿಯ ವೈಬೋಗ
ಜಗಕ್ಕೆ ತೋರಿಸಿದ ಬೀಡು ನಮ್ಮದು

ಕನ್ನಡಾಂಬೆ ರಾಯಣ್ಣ, ಚನ್ನಮ್ಮನಂತ
ಮಕಳನ್ನು ದೇಶಕ್ಕಾಗಿ ಕೊಟ್ಟವಳು
ಕ್ರಿಶ್ಣ, ಕಾವೇರಿಯಂತಹ ನದಿಗಳಿಂದ
ರೈತನ ಒಡಲು ತುಂಬಿಸಿದಳು
ಬಸವಣ್ಣ, ಅಲ್ಲಮರ
ಕಾರ‍್ಯಕ್ಕೆ ಹರ‍್ಶ ಪಟ್ಟವಳು

ಈ ದಿನ ನಿನ್ನ ಪಾದಕ್ಕೆ
ದೇವಕಣಗಿಲೆಯ ಅರ‍್ಪಿಸುವ ಮಹಾದಿನವು ತಾಯಿ

(ಚಿತ್ರ ಸೆಲೆ: expresstravelcorp.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: