ನಿನ್ನ ನಾನರಿಯಲು

– ವಿನು ರವಿ.

Lonely man near sea, love

ಅಗಾದ ಜಲರಾಶಿ
ಕಣ್ಣಿಗೆ ನಿಲುಕದು
ಅಳೆಯಲು ಬಾರದು

ಮೇಲೆದ್ದ ಅಲೆಗಳ ಒಳಗೆ
ನೀಲಾಗಸವನ್ನೆಲ್ಲಾ
ಆವರಿಸುವ ತವಕ

ಹುಣ್ಣಿಮೆ ಚಂದಿರನ
ಚೆಲುವನ್ನೆಲ್ಲಾ
ಕದಿಯುವ ಪುಳಕ

ಅಲೆ ಅಲೆಯೊಳಗೊಳಗೆ
ಸರಿಸರಿದಂತೆಲ್ಲಾ
ಆಳಕಾಳಕೆ ಇಳಿದಂತೆಲ್ಲಾ

ಮುದ್ದಾಗಿ ಅವಿತು
ಕುಳಿತ ಮುತ್ತುಗಳ ರಾಶಿ
ಚಿತ್ರ ವಿಚಿತ್ರ
ಬಣ್ಣ ಬಣ್ಣದಾ ಜೀವರಾಶಿ

ಆಟ ನೋಟಗಳ
ಗೆಲುವು ಸೋಲಿನ
ನಿರಂತರ ಚೆಲ್ಲಾಟ

ಅಳತೆಗೆ ಸಿಗದ
ಅರ‍್ತಕ್ಕೆ ನಿಲುಕದ
ಸಾವಿರ ಸಾವಿರ
ಚೆಲುವಿನ ಬೆರಗಿನ ನೋಟ

ಹನಿ ಹನಿ ಬಿಂದುವಿನೊಳಗಿನ
ಒಲವಿನ ಬೆಸುಗೆಯ
ಬೆಸೆದ ಯಾವುದೋ
ಅರಿಯದ ಸಂಬಂದವ
ಬೆಸೆದವನ ಮರ‍್ಮವ
ಅರಿಯದೇ ಹುಡುಕುಡುಕುತಲೇ
ಸರಿದು ಹೋದವೇ
ರುತುರುತುಮಾನಗಳು?

ಹೇಳು
ನಿನ್ನ ನಾನರಿಯಲು
ನಿನ್ನ ಚೆಲುವಿನಾ
ಕಲೆಯ ಬಲೆಯ ಅರಿಯಲು

ನಾ ನನ್ನೊಳಗಿನಾಳದಲ್ಲಿ
ಅದೆಶ್ಟು ಬಾರಿ
ಇಳಿಯಬೇಕು

ನೀ ಸಿಗಲು
ಕಡಲ ಒಲವಿನಾ
ಅಲೆ ಅಲೆಯೊಳಗೆ
ಅದೆಶ್ಟು ಬಾರಿ ಮುಳುಗಬೇಕು

(ಚಿತ್ರ ಸೆಲೆ: freegreatpicture.com)

ಇವುಗಳನ್ನೂ ನೋಡಿ

2 ಅನಿಸಿಕೆಗಳು

  1. Sadanand says:

    ಚೆನ್ನಾಗಿದೆ…..ಇದೆ ತರ ಕನ್ನಡವನ್ನು ಇನ್ನಸ್ಟು ಸೊಗಸುಗೊಳಿಸಿ.

  2. PRASAD KODIYA says:

    ನಾನು ಹೊನಲು ಬ್ಲಾಗ್ ನ ನಿರಂತರ ಓದುಗ ಇನ್ನು ಚೆನ್ನಾಗಿ ಬರಲಿ ಎನ್ನುದು ನನ್ನ ಅಸೆ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.