ಮಲೆನಾಡಿನ ಅಡುಗೆ ಬತ್ತಿಸಿದ ಮೀನುಗಸಿ
ಏನೇನು ಬೇಕು?
ಶುಚಿ ಮಾಡಿದ ಮೀನು – ಅರ‍್ದ ಕೆ.ಜಿ.
ಅಚ್ಚಕಾರದ ಪುಡಿ – 5 ಟಿ ಚಮಚ
ದನಿಯಾ ಪುಡಿ – 1 ಟಿ ಚಮಚ
ಅರಿಶಿನ – ಚಿಟಿಕೆ
ಈರುಳ್ಳಿ – 2 (ಮದ್ಯಮ ಗಾತ್ರ)
ಬೆಳ್ಳುಳ್ಳಿ – 1
ನಿಂಬೆ ಹಣ್ಣು – 2
ಮೆಂತೆ – 4 ಕಾಳು
ಸಾಸಿವೆ – ಚಿಟಿಕೆ
ಮಾಡುವ ಬಗೆ:
ಸಾಸಿವೆ ಮತ್ತು ಮೆಂತೆಯನ್ನು ಹುರಿದುಕೊಂಡು ನೀರುಳ್ಳಿ, ಬೆಳ್ಳುಳ್ಳಿ, ಅಚ್ಚಕಾರದ ಪುಡಿ, ಅರಿಶಿನ, ದನಿಯಾ ಪುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಶುಚಿ ಮಾಡಿದ ಮೀನಿಗೆ ರುಬ್ಬಿದ ಮಸಾಲೆಯನ್ನು ಹಾಕಿ, ನಿಂಬೆಹಣ್ಣನ್ನು ಹಿಂಡಿ, ರುಚಿಗೆ ತಕ್ಕ ಉಪ್ಪು ಹಾಕಿ ಒಂದು ಗಂಟೆ ಹಾಗೆಯೇ ಬಿಡಿ.
ಬಳಿಕ ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಈ ಮಸಾಲೆ ಸೇರಿಸಿದ ಮೀನನ್ನು ಹಾಕಿ ಒಲೆಯ ಮೇಲಿಟ್ಟು ಬತ್ತಿಸಿ. ಸಾರು ಗಟ್ಟಿಯಾಗುತ್ತಾ ಬರುವಾಗ ಇಳಿಸಿ. ಕುದಿಯುವಾಗ ಮೀನಿಗೆ ಸೌಟು ಹಾಕಬೇಡಿ ಮೀನು ಪುಡಿಪುಡಿಯಾಗುತ್ತದೆ ಇಲ್ಲವೇ ಕಲಸಿ ಹೋಗುತ್ತದೆ. ಅಶ್ಟೇ, ಮಲೆನಾಡಿನ ಬತ್ತಿಸಿದ ಮೀನುಗಸಿ ಈಗ ತಯಾರಾಯಿತು.
(ಚಿತ್ರ ಸೆಲೆ: ರೇಶ್ಮಾ ಸುದೀರ್ )
ಮಡಕೆಲಿ ಮೀನ್ ಬಚ್ಚುದ್ರೆ ರುಚಿ ಹೆಚ್ಚು.