ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ

– ಸುಹಾಸ್ ಮೌದ್ಗಲ್ಯ.

ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ
ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ

ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ
ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ
ಅಲೆಗಳ ಹೊಡೆತ ತಿನ್ನುತ ನುಗ್ಗಲೇಬೇಕು ಕಡಲ ಒಡಲಿಗೆ
ತಲುಪಲೇಬೇಕು ದಡದಲ್ಲಿರುವ ಗೆಲುವಿನ ಮಡಿಲಿಗೆ

ಇಂದು ಮುಳುಗುವ ಸೂರ‍್ಯ ಬರಬೇಕು ಮತ್ತೆ ಬಾನಿಗೆ
ನಿತ್ಯ ಕರಗುವ ಚಂದ್ರ ತುಂಬಿ ಬರಬೇಕು ಹುಣ್ಣಿಮೆ ರಾತ್ರಿಗೆ
ಕತ್ತಲು ಸರಿದಮೇಲೆ ಬರಲೇಬೇಕು ಬೆಳಕಿನ ಮೆರವಣಿಗೆ
ಇದನ್ನರಿತು ಜೀವನ ಸಾಗಿಸುವುದೇ ನಿಜವಾದ ಬೆಳವಣಿಗೆ

ಬೇಕೋ ಬೇಡವೋ ಬಂದಾಗಿದೆ ಜೀವನವೆಂಬ ಅಡವಿಗೆ
ಬಯವೆಂಬ ದಟ್ಟ ಕತ್ತಲು ಕವಿದಿದೆ ಕಾಡಿನೊಳಗೆ ಹೊರಗೆ
ಕೈಯಲ್ಲಿ ಹಿಡಿದು ಉರಿಯುತ್ತಿರುವ ಕನಸಿನ ದೀವಟಿಗೆ
ನಗುತಲಿ ಸಾಗು ಮುಂದಕ್ಕೆ ನಿನ್ನ ಗೆಲುವಿನೆಡೆಗೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Gs ಶೇಖರ says:

    Waw amazing lines

Gs ಶೇಖರ ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *