ಅಡುಗೆಮನೆ ಗುಟ್ಟುಗಳು
– ಬವಾನಿ ದೇಸಾಯಿ.
ಅಡುಗೆ ಮನೆಯಲ್ಲಿ ಕಿರಿಕಿರಿ ಎನಿಸಬಹುದಾದು ಹಲವು ಕೆಲಸಗಳಿಗೆ ಇಲ್ಲಿವೆ ಸಕ್ಕತ್ ಉಪಾಯಗಳು.
- ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ ತೆಗೆಯಿರಿ.
- ತುಟ್ಟಿಯಾದಾಗ ಈರುಳ್ಳಿ ಕೊಳ್ಳಬೇಕಾದರೆ ಕಣ್ಣೀರು ಓಕೆ, ಕತ್ತರಿಸಬೇಕಾದ್ರೆ ಯಾಕೆ..? ಸಿಪ್ಪೆ ತೆಗೆದು, ಎರಡು ಬಾಗ ಮಾಡಿ ಒಂದೆರಡು ನಿಮಿಶ ನೀರಿನಲ್ಲಿಟ್ಟು, ನಂತರ ಕತ್ತರಿಸಿ. ಹೀಗೆ ಮಾಡಿದರೆ ಕಣ್ಣೀರು ಬರದು.
- ಇರುವೆ ಮತ್ತು ಸಕ್ಕರೆಯ ನಂಟು ಕಂಡರೆ ತುಂಬಾ ಕಿರಿಕಿರಿಯೇ? ಒಂದೆರಡು ಲವಂಗದ ತುಂಡುಗಳನ್ನ ಸಕ್ಕರೆಯ ಡಬ್ಬಿಯಲ್ಲಿ ಇಡಿ. ಅಲ್ಲಿಗೆ ಇರುವೆಗಳು ತಲೆಹಾಕುವುದೂ ಇಲ್ಲ.
- ಸಕ್ಕರೆಯ ಪಾಕ ತಣ್ಣಗಾದ ಮೇಲೆ ಹರಳಾಗುವುದನ್ನು ತಡೆಯಲು, ಪಾಕಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ.
- ಹೆಪ್ಪು ಹಾಕಲು ಮೊಸರು ಇಲ್ಲವೇ? ಬೆಚ್ಚಗಿನ ಹಾಲಿಗೆ ಒಂದು ಮೆಣಸಿನಕಾಯಿಯನ್ನು ನಡುವೆ ಸೀಳಿ ಹಾಕಿ. ಹಾಂ ಹಾಗೆನೇ, ಹಾಲು ಕಾಯಿಸಬೇಕಾದ್ರೆ ಸ್ವಲ್ಪ ಹಾಲಿನ ಪೌಡರ್ ಹಾಕಿ, ಮೊಸರು ಗಟ್ಟಿಯಾಗಿ ಚೆನ್ನಾಗಿರುತ್ತೆ.
- ಮನೇಲಿ ಹಲ್ಲಿಗಳ ಕಾಟ ಹೆಚ್ಚಾಗಿದೆಯಾ? ಹಾಗಿದ್ರೆ, ಸ್ವಲ್ಪ ಕಾಪೀ ಪುಡಿ ಮತ್ತು ತಂಬಾಕು ಸೇರಿಸಿ, ಸಣ್ಣ ಉಂಡೆಗಳನ್ನು ಮಾಡಿ ಮೂಲೇಲಿ ಇಡಿ, ಹಲ್ಲಿಗಳಿಗೆ ಅದು ರಾಮಬಾಣ.
- ಬಾಳೆಹಣ್ಣಿನ ತುಂಬುಗಳನ್ನ ಅಲ್ಯೂಮಿನಿಯಂ ಹಾಳೆಯಿಂದ ಸುತ್ತಿಡಿ, ಹಣ್ಣು ಬೇಗ ಹಾಳಾಗಲ್ಲ.
- ಅಡುಗೆಮನೆಯ ಸಿಂಕ್ ತುಂಬಾ ಗಲೀಜು ಅನಿಸ್ತಾ ಇದ್ಯಾ..? ಸ್ವಲ್ಪ ಕರ್ಪೂರ ಉಪಯೋಗಿಸಿ, ವಾಸನೆ ಬರದು, ಹುಳುಗಳೂ ಇರವು.
- ಹಣ್ಣು & ತರಕಾರಿಗಳನ್ನು ತಿನ್ನುವ ಮೊದಲು ಒಂದು ಲೀಟರ್ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ತೊಳೆದು ಇಟ್ಟುಕೊಳ್ಳಿ, ಕೀಟನಾಶಕಗಳಿಂದಾಗುವ ಪರಿಣಾಮಗಳನ್ನು ತಗ್ಗಿಸಿ.
- ಬೇಳೆಕಾಳುಗಳ ಜೊತೆಗೆ ಸ್ವಲ್ಪ ಲವಂಗದ ಎಲೆ / ಒಣಗಿದ ಬೇವಿನ ಎಲೆಗಳನ್ನು ಸೇರಿಸಿ ಮತ್ತು ಹುಳುಗಳಾಗುವುದನ್ನು ತಡೆಯಿರಿ.
(ಚಿತ್ರ ಸೆಲೆ: unsplash.com, publicdomainpictures.net, wikimedia1, wikimedia2, pixabay, pixabay2)
ಇತ್ತೀಚಿನ ಅನಿಸಿಕೆಗಳು