ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ.

ಆಗಸದಲ್ಲಿಯ ಚುಕ್ಕೆಗಳೆಲ್ಲ
ತಾಳಿ ಮಕ್ಕಳ ರೂಪ
ಮನೆಮನೆಯಲ್ಲಿ ಕಂಪನು ಸೂಸಿ
ಬೆಳಗಿವೆ ಕರ‍್ಪ್ಪೂರ ದೀಪ

ಬಾನಂಗಳದ ನಕ್ಶತ್ರಗಳು
ಇಳಿದು ಬಂದು ನೆಲಕೆ
ಬಣ್ಣ ಬಣ್ಣದ ಹೂಪಕಳೆಯಲಿ
ಆಗಿಬಿಟ್ಟಿವೆ ಬೆರಕೆ

ಗಗನದ ಬೆಡಗಿನ ರಂಗದು ಸೋರಿ
ಬಿದ್ದು ನವಿಲ ಮೇಲೆ
ಗರಿಗರಿಯಲ್ಲಿ ಸಮರಸವಾಗಿ
ತೋರುತ್ತಿರುವವು ಲೀಲೆ

ಮುಗಿಲ ಮನೆಯ ತಾರೆಗಳೆಲ್ಲ
ಸೇರಿ ಆಳದ ಕಡಲು
ಮೀನುಗಳಾಗಿ ಈಜುತ ಈಜುತ
ತುಂಬಿ ಬಿಟ್ಟಿವೆ ಒಡಲು

ಮೋಡದ ಮರೆಯ ನಕ್ಶತ್ರಗಳು
ಅಕ್ಶರದೆದೆಯಲಿ ಬೆರೆತು
ಅಚ್ಚರಿ ತೋರಿವೆ ಅಂದ ಚಂದದ
ಕವಿತೆಯಾಗಿ ಹೂತು

(ಚಿತ್ರ ಸೆಲೆ: ytimg.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *