ಬೇಸನ್ ಉಂಡೆ

– ಸವಿತಾ.

ಬೇಸನ್ ಉಂಡೆ, Besan Unde,

ಏನೇನು ಬೇಕು?

  • 2 ಲೋಟ – ಕಡಲೆ ಹಿಟ್ಟು
  • 1 1/2 ಲೋಟ – ಸಕ್ಕರೆ ಪುಡಿ
  • 1/2  ಲೋಟ – ತುಪ್ಪ
  • 10 – ಗೋಡಂಬಿ
  • 10 – ಒಣ ದ್ರಾಕ್ಶಿ
  • 4 ಏಲಕ್ಕಿ

ಮಾಡುವ ಬಗೆ

  • ಕಡಲೆಬೇಳೆ ಹುರಿದು ಗಿರಣಿಯಲ್ಲಿ  ಬೀಸಿ ಹಿಟ್ಟು ಮಾಡಿಸಿ ಇಟ್ಟುಕೊಳ್ಳಿ.
  • ಎರಡು ಚಮಚ ತುಪ್ಪದಲ್ಲಿ ಗೋಡಂಬಿ, ಒಣ ದ್ರಾಕ್ಶಿ ಸ್ವಲ್ಪ ಹುರಿದು ತೆಗೆದಿಡಿ.
  • ತುಪ್ಪದಲ್ಲಿ ಕಡಲೆಹಿಟ್ಟು ಚೆನ್ನಾಗಿ ಹುರಿದು ಒಲೆ ಆರಿಸಿ ನಂತರ ಸಕ್ಕರೆ ಪುಡಿ ಮಾಡಿ ಸೇರಿಸಿ ಚೆನ್ನಾಗಿ ಕಲಸಿ.
  • ಏಲಕ್ಕಿ ಪುಡಿ ಮಾಡಿ ಸೇರಿಸಿ, ಇನ್ನೊಮ್ಮೆ ಕಲಸಿ ಉಂಡೆ ಮಾಡಿ, ಗೋಡಂಬಿ ಒಣ ದ್ರಾಕ್ಶಿ ಹಾಕಿ ಉಂಡೆ ಕಟ್ಟಿ ಇಡಿ.

ಈಗ ರುಚಿಯಾದ ಬೇಸನ್ ಉಂಡೆ ಸವಿಯಿರಿ 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.