ಕುಸುಬಿದ ಅಕ್ಕಿರೊಟ್ಟಿ

– ಕಲ್ಪನಾ ಹೆಗಡೆ.

ಕುಸುಬಿದ ಅಕ್ಕಿರೊಟ್ಟಿ Kusubida akki rotti

ಏನೇನು ಬೇಕು?

2 ಲೋಟ ಅಕ್ಕಿಹಿಟ್ಟು
3 ಲೋಟ ನೀರು
ರುಚಿಗೆ ತಕ್ಕಶ್ಟು ಉಪ್ಪು

ಮಾಡೋದು ಹೇಗೆ?

ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ರುಚಿಗೆ ತಕ್ಕಶ್ಟು ಉಪ್ಪು ಹಾಕಿಕೊಳ್ಳಿ. ಬಳಿಕ ಅಕ್ಕಿಹಿಟ್ಟನ್ನು ಹಾಕಿ ಸೌಟಿನಿಂದ ಚೆನ್ನಾಗಿ ಕಲಸಿ, 2 ನಿಮಿಶಗಳ ಕಾಲ ತಟ್ಟೆ ಮುಚ್ಚಿಡಿ. ಬಳಿಕ ಕೆಳಗೆ ಇಳಿಸಿ ಸ್ವಲ್ಪ ಆರಿದ ನಂತರ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಆಮೇಲೆ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಅಕ್ಕಿಹಿಟ್ಟು ಹಾಕಿ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ. ಆನಂತರ ಚೆನ್ನಾಗಿ ಕಾದ ದೊಸೆ ಕಾವಲಿ ಅತವಾ ರೊಟ್ಟಿ ಹಂಚಿನಲ್ಲಿ ಬೇಯಿಸಿಕೊಳ್ಳಿ.

ರೊಟ್ಟಿಯನ್ನು ಬೇಯಿಸುವಾಗ ಒಂದು ತೆಳ್ಳನೆಯ ಬಿಳಿ ಬಟ್ಟೆ ತೆಗೆದುಕೊಂಡು ರೊಟ್ಟಿಮೇಲೆ ಒತ್ತಿ, ಆಗ ಚೆನ್ನಾಗಿ ಉಬ್ಬತ್ತೆ. ಆಮೇಲೆ ನೀವು ತಯಾರಿಸಿದ ಕುಸುಬಿದ ಅಕ್ಕಿ ರೊಟ್ಟಿಯನ್ನು ಟೊಮೇಟೊ ಚಟ್ನಿಯೊಂದಿಗೆ ಅತವಾ ಕಾಳು ಬಾಜಿಯೊಂದಿಗೆ ತಿನ್ನಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: