ಒಲವೆಂಬುದು ಎಂತಹ ಸೋಜಿಗ

– ಅನಿಲ್ ಕುಮಾರ್.

ಒಲವು, ಪ್ರೀತಿ, Love

ಒಲವೆಂಬುದು ಎಂತಹ ಸೋಜಿಗ
ಅದಕ್ಕೆ ತಲೆಬಾಗುವುದು ಇಡೀ ಜಗ
ಈ ಒಲವಿನ ಸೆಳವಿಗೆ ನಾನಾಗಿರುವೆ ಈಡು
ಮನದಾಕೆಯ ಜಪವೇ ದಿನನಿತ್ಯದ ಪಾಡು

ಸರಸ-ವಿರಸಗಳಲ್ಲೆ ಮಿಂದೆದ್ದಿದೆ ಬದುಕು
ಒಮ್ಮೆ ಸವಿ ಮಾತು ಮತ್ತೊಮ್ಮೆ ಸಿಡುಕು
ಪ್ರೀತಿ ಎಂಬ ಕಡಲಲ್ಲಿ ಅಲೆ ಉಕ್ಕಿದಂತಹ‌ ಸೆಳೆತ
ಗೆಳತಿಯ ಸನಿಹವೊಂದೇ ಎನ್ನೆದೆಯ ತುಡಿತ

ಕನಸೆಂಬ ಗೂಡಿನಲಿ‌ ಚಿಲಿಪಿಲಿಗಳು ಹತ್ತಾರು
ನನಸಾಗುವುದೆಶ್ಟೋ ತಿಳಿದವರಾರು?
ತಪ್ಪುಗಳು ಹಲವು ಸುಳ್ಳುಗಳು ಕೆಲವು
ಇವುಗಳನ್ನು ಮೀರಿ ಬೆಳೆವುದೇ ಒಲವು

ಅವಳಿಲ್ಲದೆ ಬಾಳೆಲ್ಲಾ ಮಂಕು
ಇದೇ ಒಲುಮೆಯ ಪರಿ
ಕೈ ಹಿಡಿದು ಜಗವ ಎದುರಿಸುವುದೊಂದೇ ಗುರಿ
ತಿಳಿದವರು ಹೇಳಿದ್ದಾರೆ – ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲಾ ಸರಿ!

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bkrs setty says:

    ಚೆನ್ನಾಗಿ ದೆ. ಅರ್ಥ ಪೂರ್ಣ. ಭಾವಪೂರ್ಣ.

ಅನಿಸಿಕೆ ಬರೆಯಿರಿ: