ಹಿಮಾ ನಿನಗಿದೋ ಸಲಾಂ

– ವೆಂಕಟೇಶ ಚಾಗಿ.

ಹಿಮಾ ದಾಸ್, ಚಿನ್ನದ ಪದಕ, ಅತ್ಲೆಟಿಕ್ಸ್, Hima das, Medalist, IAAF World U20 Championships

ಅಸ್ಸಾಂನ ನವ ದ್ರುವತಾರೆ
ಬಾರತದ ಹೆಮ್ಮೆಯ ಕುವರಿ
ಚಿನ್ನ ಗೆದ್ದ ಶೂರ ಪ್ರತಿಬೆ
ಹಿಮಾ ನಿನಗಿದೋ ಸಲಾಂ

ಸಾಮಾನ್ಯ ರೈತನ ಮಗಳು ನೀನು
ಅಸಾಮಾನ್ಯ ಸಾದನೆಗೈದವಳೇ
ಜನರ ಮನವ ಮಿಂಚಿನಲಿ ಗೆದ್ದವಳೇ
ಹಿಮಾ ನಿನಗಿದೋ ಸಲಾಂ

ಬಡತನವ ಮೆಟ್ಟಿ ಬೆಳೆದೆ
ಸಾದನೆಯ ಗುರಿ ಶಿಕರ ಏರಿ
ಬರತ ಕೀರ‍್ತಿ ಜಗಕೆ ಸಾರಿದೆ
ಹಿಮಾ ನಿನಗಿದೋ ಸಲಾಂ

ಕಂಗಳಲ್ಲಿ ದೇಶಬಕ್ತಿ
ಸಾದನೆಗೆ ನೀನೆ ಸ್ಪೂರ‍್ತಿ
ನಿನ್ನ ಹೆಸರೇ ಒಂದು ಸೂಕ್ತಿ
ಹಿಮಾ ನಿನಗಿದೋ ಸಲಾಂ

ಬಿರುಗಾಳಿಯ ವೇಗದಲ್ಲಿ
ಶರವೇಗದಿ ಗುರಿಯ ಮುಟ್ಟಿ
ಸ್ತ್ರೀ ಕುಲಕೆ ನೀ ಮಾದರಿ
ಹಿಮಾ ನಿನಗಿದೋ ಸಲಾಂ

(ಚಿತ್ರ ಸೆಲೆ: firstpost.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *